July 2025

ಧರ್ಮಸ್ಥಳ ಪ್ರಕರಣ ಕುರಿತು ‌ಮಾನಹಾನಿಕರ ವರದಿ ಪ್ರಕಟಿಸದಂತೆ ಮಾಧ್ಯಮ ನಿರ್ಬಂಧ| ಸುಪ್ರೀಂ ಮೊರೆಹೋದ ಯೂಟ್ಯೂಬ್ ಚಾನಲ್

ಸಮಗ್ರ ನ್ಯೂಸ್: ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ವಿರೇಂದ್ರ ಹೆಗ್ಗಡೆ ಮತ್ತು ಅವರ ಸೋದರ ಡಿ. ಹರ್ಷೇಂದ್ರ ಕುಮಾರ್‌ ಬಗ್ಗೆ ಯಾವುದೇ ಸುದ್ದಿ ಪ್ರಕಟಿಸಿದಂತೆ ಬೆಂಗಳೂರು ಸಿವಿಲ್‌ ನ್ಯಾಯಾಲಯ ನೀಡಿರುವ “ಗ್ಯಾಗ್‌ ಆದೇಶ” ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗಲಾಗಿದೆ. ಬೆಂಗಳೂರು ನ್ಯಾಯಾಲಯದ ಆದೇಶ ಹಿಂದೆಂದೂ ನೀಡದಂತಹ ಆತಂಕಕಾರಿ ಆದೇಶವಾಗಿದೆ. ಇದು ವಾಕ್‌ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಎರಡಕ್ಕೂ ಧಕ್ಕೆ ತರುವ ವಿಷಯವಾಗಿದೆ .ನ್ಯಾಯ ಪ್ರಕ್ರಿಯೆಯ ಮೂಲಭೂತ ತತ್ವಗಳ ಮೇಲೆ ನಡೆಸಿರುವ ಹಲ್ಲೆಯಾಗಿದೆ ಎಂದು ಥರ್ಡ್‌ ಐ ತನ್ನ ಅರ್ಜಿಯಲ್ಲಿ […]

ಧರ್ಮಸ್ಥಳ ಪ್ರಕರಣ ಕುರಿತು ‌ಮಾನಹಾನಿಕರ ವರದಿ ಪ್ರಕಟಿಸದಂತೆ ಮಾಧ್ಯಮ ನಿರ್ಬಂಧ| ಸುಪ್ರೀಂ ಮೊರೆಹೋದ ಯೂಟ್ಯೂಬ್ ಚಾನಲ್ Read More »

ವಿಟ್ಲ: ಟಿಪ್ಪರ್‌ ಮತ್ತು ಆಲ್ಟೊ ನಡುವೆ ಡಿಕ್ಕಿ| ನವವಿವಾಹಿತ ದುರ್ಮರಣ

ಸಮಗ್ರ ನ್ಯೂಸ್: ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಚಾಲಕ ಅನೀಶ್ ಮೃತಪಟ್ಟಿದ್ದು ಹಾಗೂ ಆತನ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡ ಘಟನೆ ವೀರಕಂಬ ಗ್ರಾಮದ ಕೆಲಿಂಜದಲ್ಲಿ ನಡೆದಿದೆ. ಮೃತ ಚಾಲಕನನ್ನು ಅನಂತಾಡಿ ಆಶ್ವತ್ತಡಿ ಮೂಲದ ಅನೀಶ್ ಎಂದು ಗುರುತಿಸಲಾಗಿದೆ. ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಅನೀಶ್ ಹಾಗೂ ಅವರ ಸಹೋದರಿ

ವಿಟ್ಲ: ಟಿಪ್ಪರ್‌ ಮತ್ತು ಆಲ್ಟೊ ನಡುವೆ ಡಿಕ್ಕಿ| ನವವಿವಾಹಿತ ದುರ್ಮರಣ Read More »

ಜಗದೀಪ್‌ ಧನಕರ್‌ ರಾಜೀನಾಮೆ| ಸದ್ಯದಲ್ಲೇ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ

ಸಮಗ್ರ ನ್ಯೂಸ್‌: ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನ್ ಕರ್ ಅವರು ರಾಜೀನಾಮೆ ನೀಡಿರುವುದರಿಂದ, ಅವರ ಉತ್ತರಾಧಿಕಾರಿಯನ್ನು ನೇಮಿಸುವ ಚುನಾವಣೆಯನ್ನು ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಆದಷ್ಟು ಬೇಗ ನಡೆಸಬೇಕಾಗುತ್ತದೆ. ಸಂವಿಧಾನದ 68 ನೇ ವಿಧಿಯ ಷರತ್ತು 2 ರ ಪ್ರಕಾರ, ಉಪ ರಾಷ್ಟ್ರಪತಿ ಹುದ್ದೆಯಲ್ಲಿನ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಆ ಹುದ್ದೆಯಲ್ಲಿದ್ದವರು ಮರಣ ಹೊಂದಿದ್ದರೆ, ರಾಜೀನಾಮೆ ನೀಡಿದ್ದರೆ, ಪದಚ್ಯುತಗೊಳಿಸುವಿಕೆ ಅಥವಾ ಇನ್ಯಾವುದೇ ಕಾರಣದಿಂದಾಗಿ ತೆರವಾಗಿದ್ದರೆ ಚುನಾವಣೆಯನ್ನು ಆ ಹುದ್ದೆ ಖಾಲಿಯಾದ ನಂತರ ಆದಷ್ಟು ಬೇಗ ನಡೆಸಬೇಕಾಗುತ್ತದೆ.

ಜಗದೀಪ್‌ ಧನಕರ್‌ ರಾಜೀನಾಮೆ| ಸದ್ಯದಲ್ಲೇ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ Read More »

ನರ್ಸ್ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ‌ ರದ್ದು| ಶೀಘ್ರದಲ್ಲೇ ಭಾರತಕ್ಕೆ ವಾಪಾಸ್

ಸಮಗ್ರ ನ್ಯೂಸ್: ಯೆಮೆನ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಯೆಮೆನ್ ಗಲ್ಲು ಶಿಕ್ಷೆ ರದ್ದುಗೊಳಿಸಿದೆ.ಹಾಗೂ ಶೀಘ್ರವೇ ಅವರನ್ನ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ. ಯೆಮೆನ್ನಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕ ಕೆಎ ಪಾಲ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕೆಎ ಪಾಲ್ ಪ್ರಧಾನಿ ಮೋದಿಗೂ ಧನ್ಯವಾದ ಹೇಳಿದ್ದಾರೆ. ಯೆಮೆನ್ ರಾಜಧಾನಿ ಸನಾದಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ

ನರ್ಸ್ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ‌ ರದ್ದು| ಶೀಘ್ರದಲ್ಲೇ ಭಾರತಕ್ಕೆ ವಾಪಾಸ್ Read More »

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಖಾಸಗಿ ಕಾರ್ಯಕ್ರಮಗಳಿಗೆ ಉಚಿತ ಅನ್ನಪ್ರಸಾದ ರದ್ದತಿಗೆ ಚಿಂತನೆ

ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇನ್ನು ಮುಂದೆ ಖಾಸಗಿ ಕಾರ್ಯಕ್ರಮಗಳಿಗೆ ಉಚಿತ ಅನ್ನಪ್ರಸಾದ ವಿತರಣೆ ವ್ಯವಸ್ಥೆಯನ್ನು ನಿಲ್ಲಿಸಲು ಚಿಂತಿಸಲಾಗಿದೆ ಎಂದು ಶಾಸಕ ಅಶೋಕ ರೈ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ನಿರ್ವಹಣೆಗೆ ಹಣದ ಕೊರತೆ ಎದುರಾಗಿದ್ದು, ಈ ಹಿನ್ನಲೆ ಮುಂದಿನ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಅನ್ನಪ್ರಸಾದ ಸೇವೆಯನ್ನು ನಿಲ್ಲಿಸಲು ಸೂಚಿಸಲಾಗಿದ್ದು, ಅನ್ನಪ್ರಸಾದ ಬೇಕಾದಲ್ಲಿ ಬೇಕಾದಲ್ಲಿ ಹಣ ಕೊಟ್ಟು ಪಡೆಯುವಂತೆ ಸೂಚನೆ ನೀಡಲಾಗಿದೆ ಎಂದು

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಖಾಸಗಿ ಕಾರ್ಯಕ್ರಮಗಳಿಗೆ ಉಚಿತ ಅನ್ನಪ್ರಸಾದ ರದ್ದತಿಗೆ ಚಿಂತನೆ Read More »

ಉಪರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ| ಮುಂದೆ ಈ ಹುದ್ದೆ ಅಲಂಕರಿಸುವವರು ಯಾರು?

ಸಮಗ್ರ ನ್ಯೂಸ್: ಜಗದೀಪ್‌ ಧನಕರ್‌ ರಾಜೀನಾಮೆಯಿಂದಾಗಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. 74 ವರ್ಷದ ಧನಕರ್‌ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರದ ಅವಧಿ 2027ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು. ಉಪ ರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ವೈದ್ಯಕೀಯ ಕಾರಣಗಳನ್ನು ನೀಡಿ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭಾ ಉಪ

ಉಪರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ| ಮುಂದೆ ಈ ಹುದ್ದೆ ಅಲಂಕರಿಸುವವರು ಯಾರು? Read More »

ಜಾಗ ವಿವಾದದ ಕಾರಣ ನನ್ನ ತಂದೆಯನ್ನು ಕೊಲೆ ಮಾಡಲಾಗಿದೆ| ಧರ್ಮಸ್ಥಳದ ವಿರುದ್ಧ ಕೇರಳದಲ್ಲಿ ದೂರು ನೀಡಿದ ವ್ಯಕ್ತಿ

ಸಮಗ್ರ ನ್ಯೂಸ್: ಜಾಗದ ವಿವಾದದ ಹಿನ್ನಲೆಯಲ್ಲಿ ತನ್ನ ತಂದೆಯನ್ನು ವಾಹನ ಅಪಘಾತದ ಮೂಲಕ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಈ ಹಿಂದೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ತಾಲೂಕಿನ‌ ಇತರೆಡೆಗಳಲ್ಲಿ ವಾಸವಾಗಿದ್ದ, ಈಗ ಕೇರಳದಲ್ಲಿ ವಾಸವಾಗಿರುವ ಅನೀಶ್ ಜೋಯಿ ಎಂಬವರು ಕೇರಳದ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದ್ದು, ಪೊಲೀಸರು ಇದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ವಾಸಿಸುತ್ತಿದ್ದ ವೇಳೆ ಅನೀಶ್ ಅವರ ತಂದೆ

ಜಾಗ ವಿವಾದದ ಕಾರಣ ನನ್ನ ತಂದೆಯನ್ನು ಕೊಲೆ ಮಾಡಲಾಗಿದೆ| ಧರ್ಮಸ್ಥಳದ ವಿರುದ್ಧ ಕೇರಳದಲ್ಲಿ ದೂರು ನೀಡಿದ ವ್ಯಕ್ತಿ Read More »

ಧರ್ಮಸ್ಥಳದಲ್ಲಿ ಭಾರೀ ಹೈಡ್ರಾಮಾ| ನ್ಯಾಯಕ್ಕಾಗಿ ಪಾದಯಾತ್ರೆ ಮಾಡಿದವರಿಗೆ ಭಕ್ತರಿಂದ ತಡೆ

ಸಮಗ್ರ ನ್ಯೂಸ್: ಧರ್ಮಸ್ಥಳ ಇದೀಗ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದ್ದು, ಅನಾಮಿಕ ವ್ಯಕ್ತಿಯೊಬ್ಬನ ದೂರಿನ ಬೆನ್ನಲ್ಲೇ ಇದೀಗ ಎಸ್ ಐಟಿ ರಚನೆಯಾಗಿದ್ದು, ಈ ನಡುವೆ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಕಲಬುರ್ಗಿಯಿಂದ ಪಾದಯಾತ್ರೆಯಲ್ಲಿ ಬಂದಿದ್ದೇವೆ ಎಂದು ಹೇಳಿಕೊಂಡು ಧರ್ಮಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಮಂದಿ ಯುವಕರು ಬಂದಿದ್ದು, ಇವರನ್ನು ಸ್ಥಳೀಯರು ಅಡ್ಡಗಟ್ಟಿದ್ದು ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಸೌಜನ್ಯಳಿಗೆ ನ್ಯಾಯ ಎಂಬ ಧ್ಯೆಯದೊಂದಿಗೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ರುದ್ರವಾಡಿ ಗ್ರಾಮದ ಶರಣಪ್ಪ ನೇತೃತ್ವದ ತಂಡವು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿತ್ತು.

ಧರ್ಮಸ್ಥಳದಲ್ಲಿ ಭಾರೀ ಹೈಡ್ರಾಮಾ| ನ್ಯಾಯಕ್ಕಾಗಿ ಪಾದಯಾತ್ರೆ ಮಾಡಿದವರಿಗೆ ಭಕ್ತರಿಂದ ತಡೆ Read More »

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ| ಎಸ್ಐಟಿ ತಂಡದಿಂದ ಇಬ್ಬರು ಅಧಿಕಾರಿಗಳು ಹೊರಕ್ಕೆ?

ಸಮಗ್ರ ನ್ಯೂಸ್: ಧರ್ಮಸ್ಥಳ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನ ಹೂಳಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. SIT ತಂಡ ರಚಿಸಿ ಅರ್ಧ ದಿನ ಕಳೆಯುವಷ್ಟರಲ್ಲೇ ಆರಂಭಿಕ ವಿಘ್ನ ಎದುರಾಗಿದೆ. ವಿಶೇಷ ತನಿಖಾ ತಂಡದ ನಾಲ್ವರಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳು ಹಿಂದಕ್ಕೆ ಸರಿದಿದ್ದಾರೆ ಅನ್ನೋ ಮಾಹಿತಿ‌ ಉನ್ನತ ಮೂಲಗಳಿಂದ ತಿಳಿದುಬಂದಿದೆ. ತನಿಖೆಯಿಂದ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ| ಎಸ್ಐಟಿ ತಂಡದಿಂದ ಇಬ್ಬರು ಅಧಿಕಾರಿಗಳು ಹೊರಕ್ಕೆ? Read More »

ಧರ್ಮಸ್ಥಳ‌ ಶವ ಹೂತಿಟ್ಟ ಪ್ರಕರಣ| ತನಿಖೆಗೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಧರ್ಮಸ್ಥಳದ ಸುತ್ತಮುತ್ತಲು ನಡೆದಿವೆ ಎನ್ನಲಾದ ನೂರಾರು ಕೊಲೆ, ಅಸಹಜ ಸಾವು, ಅತ್ಯಾಚಾರ ಶಂಕೆ ಹಾಗೂ ಶವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಎಸ್​​​ಐಟಿ ರಚನೆ ಮಾಡಿದೆ. ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ನಾಲ್ವರು ಐಪಿಎಸ್​ ಅಧಿಕಾರಗಳು ಈ ವಿಶೇಷ ತನಿಖಾ ತಂಡದಲ್ಲಿದ್ದಾರೆ. ಈ ತಂಡದಲ್ಲಿ ಅನುಚೇತ್, ಜಿತೇಂದ್ರ ಕುಮಾರ್ ಸೌಮ್ಯಲತಾ ಇದ್ದಾರೆ. ಸದ್ಯದಲ್ಲೇ ಹೈಪ್ರೊಫೈಲ್​​​​​​ ಪ್ರಕರಣದ ಬಗ್ಗೆ ಎಸ್​​​​ಐಟಿ ತನಿಖೆ ಶುರು

ಧರ್ಮಸ್ಥಳ‌ ಶವ ಹೂತಿಟ್ಟ ಪ್ರಕರಣ| ತನಿಖೆಗೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರ Read More »