ಧರ್ಮಸ್ಥಳ ಪ್ರಕರಣ| 6ನೇ ಸ್ಥಳದಲ್ಲಿ ಅಸ್ಥಿ ಅವಶೇಷಗಳು ಪತ್ತೆ

ಸಮಗ್ರ ನ್ಯೂಸ್: ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ಕಾರ್ಯಾಚರಣೆಯಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿಗಳು ಲಭಿಸಿವೆ.

Ad Widget ... .. Ad Widget .

ಇಂದು ಆರನೇ ಗುರುತಿನ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಹೂಳಲಾದ ಶವಗಳ ಅಸ್ಥಿಪಂಜರ ಸಿಕ್ಕಿದೆ ಎಂಬ ಮಾಹಿತಿಗಳು ಉನ್ನತ ಮೂಲಗಳಿಂದ‌ ಲಭಿಸಿವೆ.

Ad Widget

ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತು ಮಾಡಿದ 6 ನೇ ಜಾಗದಲ್ಲಿ ಜುಲೈ 31 ರಂದು 12:45 ಗಂಟೆಗೆ ಕಳೇಬರಗಳು ಪತ್ತೆಯಾಗಿದೆ ಎಂದು ಎಸ್.ಐ.ಟಿ ಮೂಲಗಳು ತಿಳಿಸಿದೆ.

ಈ ಹಿಂದಿನ ಪಾಯಿಂಟ್ ಗಳಲ್ಲಿಯೂ ಕೆಲ ಸಾಕ್ಷಿಗಳು ದೊರೆತಿರುವುದಾಗಿ ಕೆಲವು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿತ್ತು.‌ ಅಲ್ಲದೇ ಈ ಕುರಿತಂತೆ ಸುಜಾತಾ ಭಟ್ ಪರ ವಕೀಲರು ಮೊದಲ ಪಾಯಿಂಟ್ ನಲ್ಲಿ ಎಟಿಎಂ, ಐಡಿ ಕಾರ್ಡ್, ರವಿಕೆ ಮೊದಲಾದ ವಸ್ತುಗಳು ಸಿಕ್ಕಿವೆ ಎಂದು ಪತ್ರಿಕಾ‌ ಪ್ರಕಟಣೆ ನೀಡಿದ್ದರು. ಇದೀಗ ಶವದ ಅವಶೇಷಗಳು ಪತ್ತೆಯಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Leave a Comment

Your email address will not be published. Required fields are marked *