ಚಿಕ್ಕಮಗಳೂರು: ತಾಯಿಯನ್ನು ಕೊಂದು ಸುಟ್ಟು ಹಾಕಿ ಆರಾಮಾಗಿ ಮಲಗಿದ ಪಾಪಿ ಪುತ್ರ!!

ಸಮಗ್ರ ನ್ಯೂಸ್: ಚಿಕ್ಕಮಗಳೂರಲ್ಲಿ ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದು ಅಲ್ಲದೆ ಶವವನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶವ ಪೂರ್ತಿ ಸುಡದೆ ಅರ್ಧಂಬರ್ಧ ಸುಟ್ಟಿದೆ. ಅರ್ಧಂಬರ್ಧ ಸುಟ್ಟ ಶವದ ಪಕ್ಕದಲ್ಲಿ ಮಲಗಿದ್ದಾನೆ.

Ad Widget . Ad Widget . Ad Widget . Ad Widget . Ad Widget .

ತಾಯಿ ಭವಾನಿ (55) ಹತ್ಯೆಗೈದ ಪಾಪಿ ಪುತ್ರಪವನ್. ತಾಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು ನಿರ್ಜನ ಪ್ರದೇಶದಲ್ಲಿ ಇರುವಂತಹ ಒಂಟಿಮನೆಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಯಾವ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ? ಅಥವಾ ಈತ ಏನಾದರೂ ಮಾನಸಿಕ ಅಸ್ವಸ್ಥನಾಗಿದ್ದಾನ? ಎಂದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Ad Widget . Ad Widget .

ಗ್ರಾಮಕ್ಕೆ ಭೇಟಿ ನೀಡಿದ ಪವನ್ ಬಂಧಿಸಿದ ಪೊಲೀಸರು ಆಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *