ಕೆಸರುಮಯವಾದ ರಸ್ತೆ  ಗ್ರಾಮಸ್ಥರಿಂದ ರಸ್ತೆ ಮಧ್ಯೆ  ಬಾಳೆಗಿಡನೆಟ್ಟು ಆಕ್ರೋಶ

ಕಡಬ: ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದ್ದು ರೋಸಿ ಹೋದ ಸ್ಥಳೀಯರು ರಸ್ತೆಯ ಮಧ್ಯೆ ಗುಂಡಿ ತೆಗೆದು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಡಬ ತಾಲೂಕಿನ ಏನೇಕಲ್ಲು  ಸಮೀಪದ ದೇವರಹಳ್ಳಿ ಕಲ್ಲಾಜೆ ಎಂಬಲ್ಲಿ ಜು.27 ರಂದು ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ 1 ತಿಂಗಳಿನಿಂದ  ಈ ಸಮಸ್ಯೆ ಮತ್ತೆ ಹೆಚ್ಚಾಗಿದ್ದು ಸಂಬಂಧಪಟ್ಟವರಲ್ಲಿ ಹೇಳಿಯೂ ಪರಿಹಾರವಾಗದೇ ಇದ್ದುದಕ್ಕೆ  ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸುಮಾರು 12 ಮಂದಿ ಬಾಳೆಗಿಟ್ಟು ನೆಟ್ಟು ಅಧಿಕಾರಿಗಳ ನಡೆಯನ್ನು ಟೀಕಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇನ್ನು ಇಲ್ಲಿನ  ಮರಕತ  ದೇವಸ್ಥಾನ ಹತ್ತಿರ ಡ್ಯಾಮ್ ವೊಂದು ಇದ್ದು  ಮಳೆಗೆ  ಮರಗಳು ಕೊಚ್ಚಿಕೊಂಡು ಬಂದು ಡ್ಯಾಮ್ ನಲ್ಲಿ  ಸಿಲುಕಿ ನೀರು  ಬ್ಲಾಕ್ ಆಗುತ್ತದೆ. 

ಆ ನೀರು  ಹತ್ತಿರ ಇರೋ ತೋಟ,ಮನೆಗೂ ನುಗ್ಗುತ್ತಿದ್ದು ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ. 

ಡ್ಯಾಮ್ ನಲ್ಲಿ ಸಿಲುಕುವ ಈ  ಮರದ ದಿಮ್ಮಿ ಮತ್ತು ಕಸಗಳನ್ನು ತೆಗೆದರೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.

Leave a Comment

Your email address will not be published. Required fields are marked *