ಬಂಟ್ವಾಳ: ಮದುವೆ ನಿರಾಕರಿಸಿದ ಪ್ರಿಯತಮೆಯ ಇರಿದು ನೇಣಿಗೆ ಶರಣಾದ ಯುವಕ

ಸಮಗ್ರ ನ್ಯೂಸ್: ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಗೆ ಚಾಕುವಿನಿಂದ ಇರಿದು, ಆಕೆ ಮೃತಪಟ್ಟಳೆಂದು ಭಾವಿಸಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿ ಇಂದು(ಜೂ.7) ನಡೆದಿದೆ.

Ad Widget ... ..

ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಹಲ್ಲೆಗೊಳಗಾದ ಯುವತಿಯಾಗಿದ್ದು, ಕೋಡ್ಮನ್ ಗ್ರಾಮದ ನಿವಾಸಿ ಸುಧೀರ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ.

Ad Widget

ದಿವ್ಯಾ ಮತ್ತು ಸುಧೀರ್ ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚಿನ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಂಬಂಧದಲ್ಲಿ ಬಿರುಕು ಮೂಡಿತ್ತು. ಆದಾಗ್ಯೂ, ಸುಧೀರ್ ದಿವ್ಯಾಳಿಗೆ ನಿರಂತರವಾಗಿ ಫೋನ್ ಕರೆ ಮಾಡುವುದು ಮತ್ತು ಹಿಂಬಾಲಿಸುವುದನ್ನು ಮುಂದುವರಿಸಿದ್ದನು ಎಂದು ತಿಳಿದುಬಂದಿದೆ.

ಇಂದು (ಜುಲೈ 7) ಬೆಳಿಗ್ಗೆ, ಸುಧೀರ್ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು ದಿವ್ಯಾಳನ್ನು ಭೇಟಿಯಾಗಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಸುಧೀರ್, ತಾನು ಪೂರ್ವಸಿದ್ಧತೆಯೊಂದಿಗೆ ತಂದಿದ್ದ ಚಾಕುವಿನಿಂದ ದಿವ್ಯಾಳನ್ನು ಕೊಲೆ ಮಾಡುವ ಉದ್ದೇಶದಿಂದ ಮನಬಂದಂತೆ ಇರಿದಿದ್ದಾನೆ.

ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ದಿವ್ಯಾ, ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ಇದನ್ನು ಕಂಡ ಸುಧೀರ್, ಆಕೆ ಮೃತಪಟ್ಟಿರಬಹುದೆಂದು ತಪ್ಪಾಗಿ ಭಾವಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ನೇರವಾಗಿ ದಿವ್ಯಾ ವಾಸವಿದ್ದ ಬಾಡಿಗೆ ಮನೆಗೆ ತೆರಳಿ, ಅಲ್ಲಿ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಟ್ವಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *