ಬೆಳ್ತಂಗಡಿ: ವಿದ್ಯುತ್ ಶಾಕ್ ಗೆ ಪವರ್ ಮ್ಯಾನ್ ಬಲಿ

ಸಮಗ್ರ ನ್ಯೂಸ್: ಭಾರೀ ಮಳೆ ಕಾರಣದಿಂದ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಮರ್ ಜಾಲು ಎಂಬಲ್ಲಿ ನಡೆದಿದೆ.

. Ad Widget . Ad Widget

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ನಿವಾಸಿ ವಿಜೇಶ್ ಜೈನ್ (27) ಮೃತ ಸಹಾಯಕ ಪವರ್ ಮ್ಯಾನ್. ವಿಜೇಶ್ ಅವರು HT ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಮೃತ ವಿಜೇಶ್ ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಮಗ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. Ad Widget . . Ad Widget . Ad Widget

ಇವರ ಸಾವಿನೊಂದಿಗೆ ಒಂದೇ ದಿನ ದ.ಕ ಜಿಲ್ಲೆಯಲ್ಲಿ ಮಳೆ ಸಂಬಂದಿತ ಕಾರಣಕ್ಕೆ ಐದು ಬಲಿಯಾಗಿದೆ. ಇಂದು ಮುಂಜಾನೆ ಉಳ್ಳಾಲ ತಾಲೂಕಿನ ದೇರಳಕಟ್ಟೆ ಬಳಿ ಧರೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಜೊತೆಗೆ ಕೊಂಪೆಪದವು ಎಂಬಲ್ಲಿ ಮನೆ ಮೇಲೆ ಧರೆ ಕುಸಿದು ಎರಡು ಮಕ್ಕಳು ಹಾಗೂ ವೃದ್ಧೆ ಬಲಿಯಾಗಿದ್ದರು.

Leave a Comment

Your email address will not be published. Required fields are marked *