ಸಮಗ್ರ ನ್ಯೂಸ್: ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆ.28 ರಿಂದ ಮಾ. 2 ರವರೆಗೆ ನಡೆಯುತ್ತಿದ್ದು, ಮಹಿಳಾ ವಿಚಾರ ಗೋಷ್ಠಿಯಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದರು.
ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡ
ಈ ಕಾರ್ಯಕ್ರಮವನ್ನು ಮಹಿಳಾ ಚಿಂತಕಿ ಶೈಲಜ ಹಿರೇಮಠ್ ಉದ್ಘಾಟಿಸಿದರು . ಸಾಹಿತಿಗಳಾದ ಎಸ್ ವಿ ಪಾಟೀಲ್ ಅಧ್ಯಕ್ಷತೆ ವಪಿಸಿದ್ದರು.
ವಿಚಾರ ಗೋಷ್ಠಿಯಲ್ಲಿ ಡಾ. ಅನುರಾಧಾ ಕುರುಂಜಿಯವರು “ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಬಹಳಷ್ಟು ವಿದ್ವಾಂಸರುಗಳನ್ನೊಳಗೊಂಡಂತೆ ಲಕ್ಷೋಪಾದಿಯಲ್ಲಿ ಜನರು ಆಗಮಿಸುವ ಈ ಹಂಪಿ ಉತ್ಸವವು ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಉತ್ಸವವಾಗಿದೆ.







