ಸಮಗ್ರ ನ್ಯೂಸ್: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ಬಾಲಕ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ.
ಈತ ತನ್ನ ಅಜ್ಜಿ ಮನೆಗೆಂದು ಬಂದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಈ ಮೂಲಕ ದುರಂತ ಅಂತ್ಯ ಕಂಡಿದ್ದಾನೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















