ಸುರತ್ಕಲ್: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

ಸಮಗ್ರ ನ್ಯೂಸ್: ರಾ. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಸೆ.5ರಂದು ನಡೆದಿದೆ.

Ad Widget ... ..

ಸುಟ್ಟು ಕರಕಲಾದ ಕಾರು ಬೆನ್ಸ್ ಕಂಪೆನಿಯ ಕಾರೆಂದು ಹೇಳಲಾಗುತ್ತಿದ್ದು, ಕಾರು ಉಡುಪಿಯಿಂದ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಸುರತ್ಕಲ್ ಎನ್ ಐಟಿಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ . ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

Ad Widget

ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದು, ಕದ್ರಿ ಅಗ್ನಿಶಾಮಕ ದಳದ ಕರೆ ಮಾಡಿದಾಗ, ತ್ವರಿತಗತಿಯಲ್ಲಿ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಅಧಿಕಾರಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಅಷ್ಟರಲ್ಲಿ ಕಾರು ಬೆಂಕಿಗಾಹುತಿಯಾಗಿತ್ತು.

Leave a Comment

Your email address will not be published. Required fields are marked *