ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಅರುಣ್ ಪುತ್ತಿಲ ವಿರುದ್ದ ಇದೀಗ ಆಡಿಯೋ ಸಮರ ಪ್ರಾರಂಭವಾಗಿದ್ದು, ಮಹಿಳೆಯ ಜೊತೆ ಸಂಭಾಷಣೆ ಆಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಮತ್ತೊಂದು ಆಡಿಯೋ ವೈರಲ್ ಆಗಿದೆ. ಈ ಬಾರಿ ಆಡಿಯೋ ಮಾತ್ರ ಪುತ್ತಿಲ ಪರಿವಾರದಿಂದ ಹೊರಬಂದಿರುವ ಮುಖಂಡ ರಾಜಾರಾಮ್ ಭಟ್ ಅವರು ಮಾತನಾಡಿದ್ದು ಎಂದು ಹೇಳಲಾಗಿದೆ.
ಈ ಆಡಿಯೋದಲ್ಲಿ ಅರುಣ್ ಕುಮಾರ್ ಪುತ್ತಿಲ ಸುತ್ತ ದುಷ್ಟ ಗ್ರಹಗಳಿದ್ದು, ಈ ಕುರಿತಂತೆ ಅವರಿಗೆ ನಾನು ಮೊದಲೇ ಹೇಳಿದ್ದೆ, ವಿಧಾನಸಭೆ ಚುನಾವಣೆ ಸಂದರ್ಭ ನಾನು ಅವರಿಗೆ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ಎಂದು ಹೇಳಿದ್ದೆ. ಸತ್ಯಣ್ಣ ಅವರನ್ನು ಕರೆಯಲು ಪೋನ್ ಮಾಡಿದ್ದೆ, ಆದರೆ ಸತ್ಯಣ್ಣ ಒಪ್ಪಿಲ್ಲ, ಆದರೆ ಪುತ್ತಿಲ ಕೂಡ ಸತ್ಯಣ್ಣ ಅವರನ್ನು ಕರೆಯಲು ಒಪ್ಪಿಲ್ಲ ಕಾರಣ ಸತ್ಯಣ್ಣ ಜೊತೆ ಸೋಶಿಯಲ್ ಮಿಡಿಯಾ ಇಲ್ಲ ಎಂದು ಹೇಳಿದ್ದರು. ಇನ್ನು ವೈರಲ್ ಆಗಿರುವ ಆಡಿಯೋ ಫೇಕ್ ಎಂದು ನೀವು ಹೇಳಿದರೆ ನಾನು ಅದನ್ನು ಒಂದೇ ಕ್ಷಣದಲ್ಲಿ ನಿಜ ಎಂದು ಪ್ರೂವ್ ಮಾಡುತ್ತೇನೆ ಎಂದರು.
ಪುತ್ತಿಲ ಪರಿವಾರ ಮಹಿಳೆಯು ಮಾತನಾಡಿದ ಆಡಿಯೋವನ್ನು 100 ಸಲ ಫೇಕ್ ಎಂದು ಹೇಳಬಹುದು, ಆದರೆ ನಾನು ಅದರಲ್ಲಿ ಉಲ್ಲೇಖವಾದ ವಿಚಾರವನ್ನು ನಿಜ ಎಂದು ಪ್ರೂ ಮಾಡಬಲ್ಲೆ. ದಾಖಲೆ ಸಮೇತ ಪ್ರೂ ಮಾಡಬಲ್ಲೆ, ಪುತ್ತಿಲ ಪರಿವಾರದ ಕೆಲವು ಚೇಲಗಳು ನನ್ನ ಮಾನ ಕಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಡಿಯೋದಲ್ಲಿ ರಾಜಾರಾಮ್ ಭಟ್ ಹೇಳಿದ್ದಾರೆ.


















