ಜನನ ನಿಯಂತ್ರಣಕ್ಕಾಗಿ ಬೇಕಿಲ್ಲ ಕಾಂಡೋಮ್| ಪುರುಷರಿಗಾಗಿ ಬಂದಿದೆ ಹೊಸ ಪ್ರಾಡಕ್ಟ್!! ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಜನನ ನಿಯಂತ್ರಣಕ್ಕೆ ಪುರುಷರು ಕಾಂಡೋಮ್ ಬಳಕೆ ಮಾಡುತ್ತಾರೆ. ಕೆಲವರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಖಾಯಂ ಬಂಜೆತನಕ್ಕೆ ಒಳಗಾಗುತ್ತಾರೆ. ಆದ್ರೆ ಈ ಶಸ್ತ್ರಚಿಕಿತ್ಸೆ ಬಳಿಕ ಪುರುಷನ ಲೈಂಗಿಕ ಜೀವನದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ವೈದ್ಯರು ಖಚಿತಪಡಿಸುತ್ತಾರೆ.

Ad Widget ... .. Ad Widget .

ಕಾಂಡೋಮ್ ಮತ್ತು ವ್ಯಾಸೆಕ್ಟಮಿ ಹೊರತಾಗಿ ಪುರುಷರಿಗಾಗಿ ಹೊಸ ಜನನ ನಿಯಂತ್ರಣ ಉತ್ಪನ್ನವೊಂದು ಸಿದ್ಧವಾಗುತ್ತದೆ. ಸಂಶೋಧನಕಾರರು ತಮ್ಮ ಉತ್ಪನ್ನದ ಕುರಿತು ಕೆಲವು ವಿಶೇಷ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಅಮೆರಿಕ ಸಂಶೋಧನಾ ತಂಡ ಜೆಲ್ ಮಾದರಿಯ ವಸ್ತುವೊಂದನ್ನು ಸಂಶೋಧನೆ ಮಾಡುತ್ತಿದೆ. ಈ ಜೆಲ್ ಗ್ಲೂ ಲಿಕ್ಷಿಡ್​ (ಗ್ಲೂ) ರೀತಿಯಲ್ಲಿರುತ್ತದೆ ಎಂದು ವರದಿಯಾಗಿದೆ.

Ad Widget

ಈ ಜೆಲ್‌ನ್ನು ಪುರುಷರು ತಮ್ಮ ಭುಜಗಳಿಗೆ ಹಚ್ಚಿಕೊಂಡರೆ ಸಾಕು ನಿರ್ದಿಷ್ಟ ಸಮಯದವರೆಗೆ ಸಂತಾನೋತ್ಪತ್ತಿಯ ಫಲವತ್ತತೆ ಇಳಿಕೆಯಾಗುತ್ತದೆ. ಸಂಗಾತಿ ಗರ್ಭ ತಡೆಯುವ ನಿಟ್ಟಿನಲ್ಲಿ ಪುರುಷರು ಈ ಜೆಲ್ ಬಳಕೆ ಮಾಡಬಹುದಾಗಿದೆ. ಕಾಂಡೋಮ್, ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಬಳಿಕ ಪುರುಷರಿಗೆ ಈ ಜೆಲ್ ಮೂರನೇ ಆಯ್ಕೆಯಾಗಿರಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸದ್ಯ ಈ ಜೆಲ್ ಕುರಿತು ವಿವರವಾದ ಸಂಶೋಧನೆ ನಡೆಯುತ್ತಿದೆ. ಎನ್​ಇಎಸ್​/ಟಿ ಎಂದು ಕರೆಯಲಾಗುವ ಈ ಜೆಲ್‌ನ ಸಾಧಕ-ಬಾಧಕಗಳ ಕುರಿತು ಅಧ್ಯಯನಗಳು ನಿರಂತರವಾಗಿ ನಡೆಯುತ್ತಿವೆ. ನೆಸ್ಟೊರಾನ್​ ಮತ್ತು ಟೆಸ್ಟೊಸ್ಟೆರೊನ್​ ಅಂಶಗಳ ಸಂಯೋಜನೆಯಿಂದ ಸಿದ್ಧವಾಗುವ ಈ ಎನ್​ಇಎಸ್​/ಟಿ ಜೆಲ್, ಮಹಿಳೆಯರಲ್ಲಿ ಗರ್ಭಧಾರಣೆಯನ್ನು ನಿಯಂತ್ರಿಸುವ ಗುಣವನ್ನು ಹೊಂದಿವೆ. ಹಾರ್ಮೋನ್‌ಗಳ ನಿಯಂತ್ರಣಕ್ಕಾಗಿ ನೆಸ್ಟೊರಾನ್‌ ಮಾದರಿಯ ಔಷಧಗಳನ್ನು ಈ ಜೆಲ್ ಉತ್ಪಾದನೆಯಲ್ಲಿ ಬಳಕೆ ಮಾಡಲಾಗುತ್ತದೆ.

ಈ ಔಷಧ ಅಥವಾ ಜೆಲ್‌ ಪುರುಷರಿಗೆ ನೀಡಿದಾಗ ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಸಾಮಾರ್ಥ್ಯವನ್ನು ಹೊಂದಿದೆ. ಇದರಿಂದ ವೀರ್ಯಾಣುಗಳ ಸಂಖ್ಯೆ ಇಳಿಮುಖವಾಗುತ್ತದೆ. ಈ ಜೆಲ್ ಹಾರ್ಮೋನ್‌ಗಳನ್ನು ನಿರ್ದಿಷ್ಟ ಸಮಯದವರೆಗೆ ಸ್ಥಿರವಾಗಿರಿಸುವ ಕೆಲಸ ಮಾಡೋದರಿಂದ ತಾತ್ಕಾಲಿಕವಾಗಿ ಪುರುಷನ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ವೀರ್ಯಾಣುಗಳ ಪ್ರಮಾಣ ಕ್ಷೀಣಿಸಿದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ಸಂಗಾತಿ ಗರ್ಭ ಧರಿಸಲ್ಲ. ಆದರೆ ಈ ಜೆಲ್ ಬಳಕೆಯಿಂದ ಪುರುಷರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸಂಶೋಧನೆ ಸಾಗುತ್ತಿದೆ ಎಂದು ಸಂಶೋಧಕರು ಹೇಳುತ್ತಾರೆ.

Leave a Comment

Your email address will not be published. Required fields are marked *