ಉಡುಪಿ: ಟಿಸಿ ಕೊಟ್ಟಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಟಿಸಿ ಕೊಟ್ಟಿಲ್ಲವೆಂದು ಬೇಸರದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೊನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದ್ದು ಈತ ಉತ್ತೀರ್ಣನಾಗಿದ್ದ. ಇವನು ಬೈಂದೂರು ಸರ್ಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ಆದರೆ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ.

. Ad Widget . Ad Widget

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ನಿತಿನ್‌ ಆಚಾರಿ, ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ಶಾಲೆಗೆ ಹೋಗಿದ್ದ. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬೈದಿದ್ದರಿಂದ ಬೇಸರಗೊಂಡು ಡೆತ್ ನೋಟ್ ಬರೆದು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *