ಬೀದರ್: ಬಿರುಗಾಳಿ ಸಹಿತ ಮಳೆ: ಮಹಾದ್ವಾರ ಕುಸಿತ

ಸಮಗ್ರ ನ್ಯೂಸ್ : ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

Ad Widget ... ..

ಎರಡು ದಶಕಗಳಷ್ಟು ಹಳೆಯದಾದ ಕಬ್ಬಿಣದ ಬಸವ ಮಹಾದ್ವಾರ ಶಿಥಿಲಗೊಂಡಿತ್ತು. ಇದನ್ನು ಅರಿತಿದ್ದ ಪ್ರಯಾಣಿಕರು, ಸಾರ್ವಜನಿಕರು ಬಿರುಗಾಳಿ ಸಹಿತ ಮಳೆ ಆರಂಭವಾಗುತ್ತಲೇ ಹೋಟೆಲ್ ಸೇರಿದಂತೆ ಇತರ ಸ್ಥಳಗಳಲ್ಲಿ ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದರು.

Ad Widget

ಹಾಗಾಗಿ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವಕೀಲ ಮಹೇಶ ರಾಚೋಟೆ ತಿಳಿಸಿದರು.

Leave a Comment

Your email address will not be published. Required fields are marked *