ಚಿತ್ರದುರ್ಗ: ಗಂಡನ ಮನೆಯಲ್ಲಿ ಕಿರುಕುಳ- ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ.

. Ad Widget . Ad Widget

ಆಶಾ (26) ಮೃತ ದುರ್ದೈವಿ. ಮಕ್ಕಳಾಗಿಲ್ಲ ಎಂಬ ಕಾರಣವನ್ನೇ ನೆಪವನ್ನಾಗಿ ಇಟ್ಟುಕೊಂಡು ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

. Ad Widget . . Ad Widget . Ad Widget

ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಶಾಗೆ, ಮದುವೆ ಆಗಿ 5 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಆಶಾಗೆ ತವರು ಮನೆಗೆ ವಾಪಸ್‌ ಕಳಿಸುತ್ತೇನೆ ಎಂದು ಅತ್ತೆ ಹಿಂಸೆ ನೀಡುತ್ತಿದ್ದರು.

ಪತಿ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆಶಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment

Your email address will not be published. Required fields are marked *