ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್​​ನಲ್ಲಿ ಉದ್ಯೋಗ ಖಾಲಿ ಇದೆ, ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 47 ಎಕ್ಸಿಕ್ಯೂಟಿವ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 15, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ.

Ad Widget ... ..

ಹುದ್ದೆಯ ಮಾಹಿತಿ:
ಬಿಹಾರ- 5
ದೆಹಲಿ- 1
ಗುಜರಾತ್- 8
ಹರಿಯಾಣ- 4
ಜಾರ್ಖಂಡ್​-1
ಕರ್ನಾಟಕ- 1
ಮಧ್ಯ ಪ್ರದೇಶ- 3
ಮಹಾರಾಷ್ಟ್ರ- 2
ಒಡಿಶಾ- 1
ಪಂಜಾಬ್​- 4
ರಾಜಸ್ಥಾನ- 4
ತಮಿಳುನಾಡು-2
ಉತ್ತರ ಪ್ರದೇಶ- 11

Ad Widget

ವಿದ್ಯಾರ್ಹತೆ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಎಂಬಿಎ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 1, 2024ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD (UR) ಅಭ್ಯರ್ಥಿಗಳು: 10 ವರ್ಷಗಳು
PWD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PWD (SC/ST) ಅಭ್ಯರ್ಥಿಗಳು: 15 ವರ್ಷಗಳು

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವೇತನ:
ಮಾಸಿಕ ₹ 30,000

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ರೂ.150/-
ಸಾಮಾನ್ಯ ಅಭ್ಯರ್ಥಿಗಳು: ರೂ.750/-
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಆನ್​​ಲೈನ್ ಟೆಸ್ಟ್​
ಗುಂಪು ಚರ್ಚೆ
ವೈಯಕ್ತಿಕ ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://ibpsonline.ibps.in/ipppblfeb24apply here

Leave a Comment

Your email address will not be published. Required fields are marked *