ಪೊಲೀಸ್ ಪಾತ್ರಕ್ಕೆ ನಟಿ ಮಾಲಾಶ್ರೀಯವರೇ ಸ್ಫೂರ್ತಿ : ತನಿಷಾ ಕುಪ್ಪಂಡ

ಸಮಗ್ರ ನ್ಯೂಸ್‌ : ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಆಟ ಮುಗಿಸಿ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೋಟೆಲ್ ಬ್ಯುಸಿನೆಸ್ ಜೊತೆಗೆ ಮೊನ್ನೆಯಷ್ಟೇ ಜ್ಯುವೆಲರಿ ಶಾಪ್ ಕೂಡ ಶುರು ಮಾಡಿದ್ದಾರೆ. ಈ ನಡುವೆ ಶೇರ್ ಹೆಸರಿನ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಎತ್ತಿದ್ದಾರೆ. ಈ ಪಾತ್ರಕ್ಕೆ ನಟಿ ಮಾಲಾಶ್ರೀ ಅವರು ಸ್ಪೂರ್ತಿ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

. Ad Widget . Ad Widget . Ad Widget

ತನಿಷಾ ಕುಪ್ಪಂಡ ಮಾತುಗಳ ಮೂಲಕ ಗಮನ ಸೆಳೆದ ನಟಿ. ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಎಂದೇ ಪ್ರಸಿದ್ಧಿಯಾಗಿದ್ದರು. ಇದೀಗ ಕಾಕಿ ತೊಟ್ಟು ತನಿಷಾ ಅವರು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.

. Ad Widget .

ಕನ್ನಡತಿ ಹೀರೋ ಕಿರಣ್ ರಾಜ್ನಟನೆಯ ‘ಶೇರ್’ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿಯೇ ಮಾಹಿತಿ ನೀಡಿದ್ದಾರೆ. ನಟಿಯ ಲುಕ್‌ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪೊಲೀಸ್ ಅವತಾರದಲ್ಲಿರುವ ವಿವಿಧ ಭಂಗಿಯ ಫೋಟೋಗಳನ್ನು ನಟಿ ತನಿಷಾ ಕುಪ್ಪಂಡ ಶೇರ್ ಮಾಡಿದ್ದಾರೆ.

Leave a Comment

Your email address will not be published. Required fields are marked *