March 2024

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ

ಸಮಗ್ರ ನ್ಯೂಸ್: ಚಂದ್ರಯಾನ-3 ಮಿಷನ್‍ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ ನೀಡಿದೆ. ಚಂದ್ರನ ಮೇಲೆಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ ಎಂದು ಕರೆಯಲಾಗಿತ್ತು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಪ್ಯಾರಿಸ್ ಮೂಲದ ಐಎಯು ಅನುಮೋದನೆ ನೀಡಿದೆ. ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ ಖಗೋಳ ಸಂಸ್ಥೆಯು ಅನುಮೋದಿಸಿದ ಗ್ರಹಗಳ ಹೆಸರುಗಳ […]

ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಹೆಸರು ಫೈನಲ್/ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ ಅನುಮೋದನೆ Read More »

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ

ಸಮಗ್ರ ನ್ಯೂಸ್: ಭಾರತದೊಂದಿಗೆ ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ವ್ಯಾಪಾರ ಸಂಬಂಧವನ್ನು ಮತ್ತೀಗ ಪುನಃಸ್ಥಾಪಿಸಲು ಪಾಕಿಸ್ತಾನ ಒಲವು ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವಂತಿದೆ ಎಂಬ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ. ಲಂಡನ್ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ.

ಭಾರತದ ಜೊತೆ ಮತ್ತೆ ವ್ಯಾಪಾರ ಸಂಬಂಧ ಬೆಳೆಸಲು ಒಲವು ತೋರಿದ ಪಾಕಿಸ್ತಾನ Read More »

ಉತ್ತರಪ್ರದೇಶದಲ್ಲಿ 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸಮಗ್ರ ನ್ಯೂಸ್: ಬಹುಜನ ಸಮಾಜ ಪಕ್ಷವು ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ 16 ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಪಕ್ಷವು ಇದುವರೆಗೆ ಸಹರಾನ್‌ಪುರ, ಕೈರಾನಾ, ಮುಜಾಫರ್‌ನಗರ, ಬಿಜ್ನೌರ್, ನಗೀನಾ (ಎಸ್‌ಸಿ), ಮುರಾದಾಬಾದ್, ರಾಂಪುರ್, ಸಂಭಾಲ್, ಅಮ್ರೋಹಾ, ಮೀರತ್, ಬಾಗ್‌ಪತ್ ಮತ್ತು ಇತರ ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಸಹರಾನ್ಪುರ: ಮಜೀದ್ ಅಲಿ ಕೈರಾನಾ: ಶ್ರೀಪಾಲ್ ಸಿಂಗ್ ಮುಜಾಫರ್‌ನಗರ: ದಾರಾ ಸಿಂಗ್ ಪ್ರಜಾಪತಿ ಬಿಜ್ನೌರ್: ವಿಜೇಂದ್ರ ಸಿಂಗ್ ನಗೀನಾ (SC): ಸುರೇಂದ್ರ ಸಿಂಗ್ ಪಾಲ್ ಮುರಾದಾಬಾದ್:

ಉತ್ತರಪ್ರದೇಶದಲ್ಲಿ 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ Read More »

3, 6 ನೇ ತರಗತಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ

ಸಮಗ್ರ ನ್ಯೂಸ್‌:: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮಂಡಳಿಯು 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.ಪಠ್ಯಕ್ರಮದ ಜೊತೆಗೆ, ಕೌನ್ಸಿಲ್ 6 ನೇ ತರಗತಿಗೆ ಪಠ್ಯಕ್ರಮ ಸೇತುವೆ ಕಾರ್ಯಕ್ರಮ ಮತ್ತು 3 ನೇ ತರಗತಿಯಿಂದ CBSE, ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ಮಾರ್ಗಸೂಚಿಗಳನ್ನು ಸಹ ಒದಗಿಸುತ್ತದೆ. 3, 6 ನೇ ತರಗತಿಗಳ ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯಲ್ಲಿನ ಪರಿಷ್ಕರಣೆ ಮತ್ತು ಸಮಯದ ಹಂಚಿಕೆಯಲ್ಲಿ ಬದಲಾವಣೆಯ ಬಗ್ಗೆ ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಪೋಷಕರಿಗೆ ತಿಳಿಸಲು CBSE

3, 6 ನೇ ತರಗತಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ Read More »

ಕಡಬ:ಶಾಂತಿಮೊಗೇರು ಕಿಂಡಿ ಆಣೆಕಟ್ಟು ಬರಿದು ಆರೋಪ| ಊರವರ ಆಕ್ರೋಶಕ್ಕೆ ಜಾಗ ಖಾಲಿ ಮಾಡಿದ ಮರಳು ದಂಧೆಕೋರರು

ಸಮಗ್ರ ನ್ಯೂಸ್‌: ಕುಮಾರಧಾರ ನದಿಗೆ ಕಡಬ ತಾಲೂಕಿನ ಶಾಂತಿಮೊಗೇರು ಎಂಬಲ್ಲಿ ನಿರ್ಮಿಸಿರುವ ಬೃಹತ್ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗಿ ಅಣೆಕಟ್ಟು ಬರಿದಾಗಿದೆ. ಇದಕ್ಕೆ ಮರಳು ದಂಧೆಯವರೇ ಪ್ರಮುಖ ಕಾರಣ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ ಬೆನ್ನಿಗೆ ಮರಳು ತೆಗೆಯುತ್ತಿದ್ದವರು ತಮ್ಮ ಎಲ್ಲಾ ವಸ್ತುಗಳೊಂದಿಗೆ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ. ಅಣೆಕಟ್ಟಿಗೆ ಅಳವಡಿಸಿದ್ದ ಹಲಗೆಯನ್ನು ರಾತೋರಾತ್ರಿ ತೆಗೆದಿರುವುದಲ್ಲದೆ, ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಡಲಾಗಿದೆ. ಅಲ್ಲದೆ ಕೆಲವು ಹಲಗೆಯ ಅಡಿಯಲ್ಲಿದ್ದ ರಬ್ಬರ್ ವಾಷರನ್ನು ತೆಗೆಯಲಾಗಿದೆ.

ಕಡಬ:ಶಾಂತಿಮೊಗೇರು ಕಿಂಡಿ ಆಣೆಕಟ್ಟು ಬರಿದು ಆರೋಪ| ಊರವರ ಆಕ್ರೋಶಕ್ಕೆ ಜಾಗ ಖಾಲಿ ಮಾಡಿದ ಮರಳು ದಂಧೆಕೋರರು Read More »

ಪ್ರೇಕ್ಷಕರನ್ನು ಸೆಳೆದ ‘ಬ್ಲಿಂಕ್’ ಸಿನಿಮಾ: ಶೋಗಳ ಸಂಖ್ಯೆ ಹೆಚ್ಚಳ

ಸಮಗ್ರ ನ್ಯೂಸ್‌: ‘ಬ್ಲಿಂಕ್’ ಕನ್ನಡ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಯಶಸ್ವಿಯಾಗುತ್ತಿವೆ. ಕೆಲ ಯುವಕರ ತಂಡಗಳು ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿರುವುದು ಭರವಸೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆದಾಗ ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಸಿನಿಮಾ, ಕಂಟೆಂಟ್ನಿಂದ ಪ್ರೇಕ್ಷಕರನ್ನು ಸೆಳೆದು ಇದೀಗ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದೆ. ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ‘ಬ್ಲಿಂಕ್’ ಸಿನಿಮಾಗೆ ಪ್ರಾರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ. ಆರಂಭದ ದಿನಗಳಲ್ಲಿ ಸಿನಿಮಾ ನೋಡಿದ

ಪ್ರೇಕ್ಷಕರನ್ನು ಸೆಳೆದ ‘ಬ್ಲಿಂಕ್’ ಸಿನಿಮಾ: ಶೋಗಳ ಸಂಖ್ಯೆ ಹೆಚ್ಚಳ Read More »

147 ಹುದ್ದೆಗಳಿಗೆ ಜಾಬ್ ಹೈರಿಂಗ್ ಮಾಡಿದ ಕೇಂದ್ರ ಲೋಕಸೇವಾ ಆಯೋಗ!

ಸಮಗ್ರ ಉದ್ಯೋಗ: ಕೇಂದ್ರ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 147 ಸೈಂಟಿಸ್ಟ್​-ಬಿ, ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 11, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಸೈಂಟಿಸ್ಟ್-ಬಿ- 12ಆಂಥ್ರೋಪಾಲಜಿಸ್ಟ್​- 1ಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್- 123ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4ಅಸಿಸ್ಟೆಂಟ್ ಡೈರೆಕ್ಟರ್- 7 ವಿದ್ಯಾರ್ಹತೆ:ಸೈಂಟಿಸ್ಟ್-ಬಿ- ಮೆಕ್ಯಾನಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್, ಸ್ನಾತಕೋತ್ತರ ಪದವಿಆಂಥ್ರೋಪಾಲಜಿಸ್ಟ್​- ಸ್ನಾತಕೋತ್ತರ ಪದವಿಸ್ಪೆಷಲಿಸ್ಟ್​ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್-

147 ಹುದ್ದೆಗಳಿಗೆ ಜಾಬ್ ಹೈರಿಂಗ್ ಮಾಡಿದ ಕೇಂದ್ರ ಲೋಕಸೇವಾ ಆಯೋಗ! Read More »

ಕೊಡಗು:ಆನೆ ಚೌಕೂರು ವಲಯದಲ್ಲಿ ಹೆಣ್ಣು ಹುಲಿಯ ಕಳೆಬರಹ ಪತ್ತೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ನಾಗರಹೊಳೆಯ ಹುಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವಲಯದಲ್ಲಿ ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಆನೆ ಚೌಕೂರು ವನ್ಯಜೀವಿ ವಲಯದ ಗಣಗೂರು ತಾವರಕೆರೆ ಅರಣ್ಯ ಪ್ರದೇಶದಲ್ಲಿ ಹುಲಿಯ ಕಳೆಬರ ಸಿಕ್ಕಿದೆ ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸಿದ ಕುರುಹು ಇಲ್ಲಿ ಪತ್ತೆಯಾಗಿದೆ ನಾಗರಹೊಳೆ ಉದ್ಯಾನವನದ ಮುಖ್ಯ ಪಶುವೈದ್ಯಾಧಿಕಾರಿ ರಮೇಶ್ ಹಾಗೂ ಬಾಳೆಲೆಯ ಪಶು ವೈದ್ಯಾಧಿಕಾರಿ ಭವಿಷ್ ಕುಮಾರ್ ಅವರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದರು

ಕೊಡಗು:ಆನೆ ಚೌಕೂರು ವಲಯದಲ್ಲಿ ಹೆಣ್ಣು ಹುಲಿಯ ಕಳೆಬರಹ ಪತ್ತೆ Read More »

ಮೈಸೂರು: ಸಭೆ, ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದಿದ್ದ 700 ಕೆಜಿ ಬೆಳ್ಳಿಯನ್ನು ಮಲೆ ಮಹದೇಶ್ವರನಿಗೆ ಕಾಣಿಕೆಯಾಗಿ ಕೊಟ್ಟ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಬಿಜೆಪಿಯವರು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದೆಲ್ಲ ಆಪಾದಿಸುತ್ತಾರಲ್ಲ ಯಾವತ್ತಾದರೂ ಸಿದ್ದರಾಮಯ್ಯ ತರಹ 700 ಕೆಜಿ ಯಷ್ಟು ದೊಡ್ಡ ಪ್ರಮಾಣದ ಬೆಳ್ಳಿಯನ್ನು ದೇವಸ್ಥಾನಕ್ಕೆ ಕೊಟ್ಟಿದ್ದಾರಾ? ಎಂದು ಹೇಳಿದವರು ಮತ್ಯಾರೂ ಅಲ್ಲ ಹುಣಸೂರು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್. ರಾಜ್ಯದಲ್ಲಿ 77 ಬೆಟ್ಟಗಳ ಒಡೆಯ ಉಘೇ ಉಘೇ ಅಂತಾನೆ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆಯುತ್ತಾರೆ. ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಇರುವ ದೇವಸ್ಥಾನಗಳಲ್ಲಿ ಈ ಬೆಟ್ಟನ್ನೂ ಒಂದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ

ಮೈಸೂರು: ಸಭೆ, ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದಿದ್ದ 700 ಕೆಜಿ ಬೆಳ್ಳಿಯನ್ನು ಮಲೆ ಮಹದೇಶ್ವರನಿಗೆ ಕಾಣಿಕೆಯಾಗಿ ಕೊಟ್ಟ ಸಿಎಂ ಸಿದ್ದರಾಮಯ್ಯ Read More »

ಸುಬ್ರಹ್ಮಣ್ಯ: ಮತ್ತೆ ಕಾಣಿಸಿಕೊಂಡ ಶಂಕಿತ ನಕ್ಸಲರು!?

ಸಮಗ್ರ ನ್ಯೂಸ್: ವಾರದ ಹಿಂದೆಯಷ್ಟೇ ದಕ್ಷಿಣ ಕನ್ನಡ ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಭೇಟಿ ನೀಡಿದ ಸಂಗೀತ ನಕ್ಸಲರು ಇದೀಗ ಕಡಪ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನಲ್ಲಿ ಸುಳಿದಾಡಿದ್ದಾರೆ ಎಂದು ತಿಳಿದು ಬಂದಿದೆ. ಕುಮಾರ ಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಸಮೀಪದ ಮನೆ ಒಂದಕ್ಕೆ ಸಂಕಿತ ನಕ್ಸಲರು ಭೇಟಿ ನೀಡಿದ್ದರು ಎಂದು ಹೇಳಲಾಗಿದೆ ಮಾ.23ರಂದು ಕಾರ್ಮಿಕರೊಬ್ಬರ ಮನೆಗೆ ಭೇಟಿ ನೀಡಿದ್ದಾಗ ಕಾರ್ಮಿಕ ಪ್ರವೇಶ ನಿರಾಕರಿಸಿ ಬಾಗಿಲು ಬಂದ್ ಮಾಡಿದ್ದಾಗ

ಸುಬ್ರಹ್ಮಣ್ಯ: ಮತ್ತೆ ಕಾಣಿಸಿಕೊಂಡ ಶಂಕಿತ ನಕ್ಸಲರು!? Read More »