March 2024

“ಆರ್ಟಿಕಲ್ 370” ಸಿನಿಮಾ/ ಏಪ್ರಿಲ್ 19ರಂದು ಒಟಿಟಿಯಲ್ಲಿ ರಿಲೀಸ್

ಸಮಗ್ರ ನ್ಯೂಸ್”: ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದ ಘಟನೆಗಳನ್ನು ಆಧರಿಸಿ ಮೂಡಿ ಬಂದ ‘ಆರ್ಟಿಕಲ್ 370’ ಸಿನಿಮಾ ಇದೀಗ ಒಟಿಟಿಯಲ್ಲಿ ಅಬ್ಬರಿಸಲು ‘ಆರ್ಟಿಕಲ್ 370’ ಸಿದ್ಧವಾಗಿದೆ. ನಟಿ ಯಾಮಿ ಗೌತಮ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗಿದೆ. ಆರಂಭದಲ್ಲೇ ‘ಆರ್ಟಿಕಲ್ 370’ ಸಿನಿಮಾಗೆ ಸಾಧಾರಣ ಕಲೆಕ್ಷನ್ ಆಯಿತು. ನಂತರದ ದಿನಗಳಲ್ಲಿ ಅದೇ ಸ್ಥಿತಿ ಮುಂದುವರಿಯಿತು. ಅಚ್ಚರಿ ಏನೆಂದರೆ, ಸತತ ಒಂದು ತಿಂಗಳ ಪ್ರದರ್ಶನದ […]

“ಆರ್ಟಿಕಲ್ 370” ಸಿನಿಮಾ/ ಏಪ್ರಿಲ್ 19ರಂದು ಒಟಿಟಿಯಲ್ಲಿ ರಿಲೀಸ್ Read More »

IPL ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ಕೆಲಕಾಲ ಆಟ ಸ್ಥಗಿತ

ಸಮಗ್ರ ನ್ಯೂಸ್: ಐಪಿಎಲ್​ನ ರಾಜಸ್ಥಾನ್​ ರಾಯಲ್ಸ್ ಮತ್ತು ಲಕ್ನೋ ಸೂಪರ್​ ಜೈಂಟ್ಸ್ ನಡುವಣ ಪಂದ್ಯ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಸ್ಪೈಡರ್ ಕ್ಯಾಮೆರಾದ ಕೇಬಲ್​ ಏಕಾಏಕಿ ತುಂಡಾಗಿ ಪಿಚ್​ ಮೇಲೆ ಬಿದ್ದ ಘಟನೆ ನಡೆದಿದೆ. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತು. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್​ 2 ಎಸೆತಗಳನ್ನು ಎದುರಿಸಿದ್ದ ವೇಳೆ ಸ್ಪೈಡರ್ ಕ್ಯಾಮೆರಾದ ಕೇಬಲ್​ ತುಂಡಾಗಿ ಪಿಚ್ ಮೇಲೆ ಬಿದ್ದಿತು. ಇದರಿಂದ ಕೆಲವು ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಬಳಿಕ ಮೈದಾನ ಸಿಬ್ಬಂದಿಗಳು ಇದನ್ನು ತೆರವುಗೊಳಿಸಿ

IPL ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ಕೆಲಕಾಲ ಆಟ ಸ್ಥಗಿತ Read More »

ಬಿಜೆಪಿಯ 5ನೇ ಪಟ್ಟಿ‌ ಬಿಡುಗಡೆ| ಅನಂತ್ ಕುಮಾರ್ ಹೆಗ್ಡೆಗೆ ಕೋಕ್| ಶೆಟ್ಟರ್ ಗೆ ಬೆಳಗಾವಿ ಟಿಕೆಟ್

ಸಮಗ್ರ ನ್ಯೂಸ್: ಬಿಜೆಪಿಯು ಲೋಕ ಸಭಾ ಚುನಾವಣೆಗೆ 5 ನೇ ಪಟ್ಟಿ ಬಿಡುಗಡೆ ಮಾಡಿದ್ದು, 111 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಖರ ಹಿಂದುತ್ವವಾದಿ ಕರ್ನಾಟಕದ ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಲೋಕಸಭಾ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಚಿತ್ರನಟಿ ಕಂಗನಾ ರನೌತ್ ಲೋಕಸಭೆಗೆ ಸ್ಫರ್ಧಿಸಲಿದ್ದಾರೆ. ದುಮ್ಕಾದಿಂದ ಸೀತಾ ಸೊರೆನ್, ಬೆಳಗಾವಿಯಿಂದ ಜಗದೀಶ ಶೆಟ್ಟರ್

ಬಿಜೆಪಿಯ 5ನೇ ಪಟ್ಟಿ‌ ಬಿಡುಗಡೆ| ಅನಂತ್ ಕುಮಾರ್ ಹೆಗ್ಡೆಗೆ ಕೋಕ್| ಶೆಟ್ಟರ್ ಗೆ ಬೆಳಗಾವಿ ಟಿಕೆಟ್ Read More »

ಪುತ್ತೂರು: ನಟೋರಿಯಸ್ ಅಂತರಾಜ್ಯ ಕಳ್ಳಿ ಅರೆಸ್ಟ್

ಸಮಗ್ರ ನ್ಯೂಸ್: ಫೆಬ್ರವರಿ ತಿಂಗಳಲ್ಲಿ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಈಶ್ವರಿ (45) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಆಕೆ ಕಳವು ನಡೆಸಿದ ಸುಮಾರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ

ಪುತ್ತೂರು: ನಟೋರಿಯಸ್ ಅಂತರಾಜ್ಯ ಕಳ್ಳಿ ಅರೆಸ್ಟ್ Read More »

ಕಲಬೆರಕೆ ಮದ್ಯ ಸೇವನೆ|21 ಮಂದಿ ಮೃತ್ಯು, 40 ಮಂದಿ ಅಸ್ವಸ್ಥ

ಸಮಗ್ರ ನ್ಯೂಸ್: ಕಲಬೆರಕೆಯಾಗಿರುವ ಮದ್ಯವನ್ನು ಸೇವಿಸಿ 21 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್ನ ಹಾಡಿ ಸಂಗ್ರೂರ್ನಲ್ಲಿ ನಡೆದಿದೆ. ಎಥೆನಾಲ್ ಇರುವ ಮದ್ಯ ಸೇವಿಸಿದ್ದರಿಂದ ಈ ದುಷ್ಕೃತ್ಯ ನಡೆದಿದೆ ಎಂಬ ಮಾಹಿತಿಯನ್ನು ನೀಡಿದರು. ಮದ್ಯ ಸೇವಿಸಿದ 40ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಸಂಗ್ರೂರ್ ಮುಖ್ಯ ವೈದ್ಯಕೀಯ ಅಧಿಕಾರಿ (CMO)

ಕಲಬೆರಕೆ ಮದ್ಯ ಸೇವನೆ|21 ಮಂದಿ ಮೃತ್ಯು, 40 ಮಂದಿ ಅಸ್ವಸ್ಥ Read More »

ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬದ ಸಂಭ್ರಮ/ ಆಯೋಧ್ಯೆಯಲ್ಲಿ ಸಕಲ ಸಿದ್ಧತೆ

ಸಮಗ್ರ ನ್ಯೂಸ್: ಆಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಟೆ ಬಳಿಕ ಇದೇ ಮೊದಲ ಬಾರಿಗೆ ಶ್ರೀ ರಾಮ ಮಂದಿರದಲ್ಲಿ ಹೋಳಿ ಹಬ್ಬದ ಸಂಭ್ರಮ. ಹೀಗಾಗಿ ಅದ್ಧೂರಿ ಹಬ್ಬದ ಆಚರಣೆಗೆ ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಭವ್ಯ ಮಂದಿರದಲ್ಲಿ ಶ್ರೀರಾಮನಿಗೆ ಮೊದಲ ಹೋಳಿ ಹಬ್ಬ ಆಚರಣೆಯಾಗಿದೆ. ಹೀಗಾಗಿ ವಿಶೇಷವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೋಳಿ ಹಬ್ಬ ಆಚರಣೆ ವೇಳೆ ರಾಮಲಲಾನಿಗೆ ಬಣ್ಣ ಹಚ್ಚಲಾಗುತ್ತದೆ. ಇದೇ ವೇಳೆ ಕಚೋರಿ, ಗುಜಿಯಾ, ಪುರಿ, ಕಡುಬು ಸೇರಿದಂತೆ ಇತರ ಭಕ್ಷ್ಯಗಳನ್ನು

ರಾಮಮಂದಿರದಲ್ಲಿ ಮೊದಲ ಹೋಳಿ ಹಬ್ಬದ ಸಂಭ್ರಮ/ ಆಯೋಧ್ಯೆಯಲ್ಲಿ ಸಕಲ ಸಿದ್ಧತೆ Read More »

ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ಸಮಗ್ರ ನ್ಯೂಸ್: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕುತ್ತಿಲ್ಲ ಎಂದು ಕೇರಳ ಸರ್ಕಾರ ರಾಷ್ಟ್ರಪತಿ ದೌಪದಿ ಮುರ್ಮು ಅವರ ವಿರುದ್ಧ ಸುಪ್ರೀಂ ಕೋರ್ಟ್‍ನ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳ ರಾಜ್ಯಪಾಲ ಆಸಿಫ್ ಮೊಹಮ್ಮದ್ ಖಾನ್ ಹಾಗೂ ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಈ ಅರ್ಜಿಯಲ್ಲಿ ಪ್ರತಿವಾದಿಗಳು ಎಂದು ಹೆಸರಿಸಲಾಗಿದೆ. ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 2) ಮಸೂದೆ -2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ – 2022, ವಿಶ್ವವಿದ್ಯಾಲಯ

ರಾಷ್ಟ್ರಪತಿ ವಿರುದ್ಧವೇ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ Read More »

ಸೈನಿಕರೊಂದಿಗೆ ಹೋಳಿ ಹಬ್ಬ ಆಚರಿಸಿದ ರಾಜನಾಥ್ ಸಿಂಗ್

ಸಮಗ್ರ ನ್ಯೂಸ್: ರಕ್ಷಣಾ ಸಚಿವಾ ರಾಜ್‍ನಾಥ್ ಸಿಂಗ್ ಲೇಹ್‍ಗೆ ತೆರಳಿ ಸೈನಿಕರೊಂದಿಗೆ ಸಂಭ್ರಮದಿಂದ ಬಣ್ಣದ ಹಬ್ಬ ಹೋಳಿಯನ್ನು ಆಚರಿಸಿದರು. ಹೋಳಿ ಹಬ್ಬ ಆಚರಣೆ ವೇಳೆ ರಾಜನಾಥ್ ಸಿಂಗ್ ಜೊತೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಉಪಸ್ಥಿತರಿದ್ದರು. ಈ ಸಂದರ್ಭ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ನಮ್ಮ ರಾಜಧಾನಿಯಾದರೇ, ಲಡಾಖ್ ಶೌರ್ಯವನ್ನು ತೋರಿಸುವ ಮತ್ತೊಂದು ರಾಜಧಾನಿಯಾಗಿದೆ. ನಿಮ್ಮೆಲ್ಲರನ್ನು ಭೇಟಿ ಮಾಡಿ ಹೋಳಿ ಆಚರಿಸಿರುವುದು ನನಗೆ ಅತ್ಯಂತ ಸಂತೋಷದಾಯಕ ಕ್ಷಣ. ಸಿಯಾಚಿನ್

ಸೈನಿಕರೊಂದಿಗೆ ಹೋಳಿ ಹಬ್ಬ ಆಚರಿಸಿದ ರಾಜನಾಥ್ ಸಿಂಗ್ Read More »

ಜೆಎನ್‍ಯು ವಿದ್ಯಾರ್ಥಿ ಘಟಕದ ಚುನಾವಣೆ/ ಗೆದ್ದು ಬೀಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಸಮಗ್ರ ನ್ಯೂಸ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್( ಎಬಿವಿಪಿ) ದೆಹಲಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಜೆಎನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸ್ಥಾನ ಮತ್ತು ಇತರ ಮೂರು ಸ್ಥಾನಗಳನ್ನೂ ಎಬಿವಿಪಿ ಪಾಲಾಗಿದೆ. ಎಬಿವಿಪಿ ನಾಯಕ ಉಮೇಶ್ ಚಂದ್ರ ಜೆಎನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆನ್‍ಯು ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿ ಉಮೇಶ್ ಚಂದ್ರ, ಉಪಾಧ್ಯಕ್ಷನಾಗಿ ಅವಿಜಿತ್ ಘೋಷ್, ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ಆನಂದ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಗೋವಿಂದ್ ದಂಗಿ ಆಯ್ಕೆಯಾಗಿದ್ದಾರೆ.

ಜೆಎನ್‍ಯು ವಿದ್ಯಾರ್ಥಿ ಘಟಕದ ಚುನಾವಣೆ/ ಗೆದ್ದು ಬೀಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ Read More »

ಲೋಕಸಭಾ ಚುನಾವಣೆ/ ಮೋದಿ ವಿರುದ್ಧ ಮತ್ತೆ ಕಣಕ್ಕಿಳಿದ ಕಾಂಗ್ರೆಸ್ಸಿನ ಅಜಯ್ ರೈ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ವಾರಣಾಸಿಯಿಂದ ಪ್ರದಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಅಜಯ್ ರೈ ಹೆಸರನ್ನು ಘೋಷಿಸಿದೆ. 2014, 2019ರಲ್ಲೂ ಅಜಯ್ ರೈ ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ 3ನೇ ಬಾರಿಗೆ ಅಜಯ್ ರೈ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ. ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಅಜಯ್ ರೈ ಮಾಜಿ ಬಿಜೆಪಿ ನಾಯಕ. 1996 ರಿಂದ 2007ರ ವರೆಗೆ ಉತ್ತರ ಪ್ರದೇಶದ ಕೋಲಸಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆ/ ಮೋದಿ ವಿರುದ್ಧ ಮತ್ತೆ ಕಣಕ್ಕಿಳಿದ ಕಾಂಗ್ರೆಸ್ಸಿನ ಅಜಯ್ ರೈ Read More »