ರಾಜ್ಯಸಭಾ ಚುನಾವಣೆ ಎ.ಎಸ್.ಪೊನ್ನಣ್ಣ ರವರಿಂದ ಪೂರ್ವ ಸಿದ್ದತೆ ವೀಕ್ಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಫೆ. 27ರಂದು ಚುನಾವಣೆ ನಡೆಯಲಿದ್ದು, ವಿಧಾನ ಸೌಧದಲ್ಲಿ ಸಿದ್ದವಾಗುತ್ತಿರುವ ಮತಗಟ್ಟೆಯನ್ನು
ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ರವರು ಫೆ. 23 ರಂದು ಸಂಜೆ ವೀಕ್ಷಣೆ ಮಾಡಿದರು.

. Ad Widget . Ad Widget

ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಐದನೇ ಅಭ್ಯರ್ಥಿ ಕಣದಲ್ಲಿರುವುದರಿಂದ ಅಡ್ಡ ಮತದಾನವಾಗದೇ ಇರಲು ಕಾಂಗ್ರೆಸ್ ಮುಂಜಾಗ್ರತಾ ಕ್ರಮ ವಹಿಸಿದ್ದು ಕಾನೂನಾತ್ಮಕವಾಗಿ ಚುನಾವಣೆ ನಡೆಸುವ ಸಲುವಾಗಿ ಕಾನೂನು ತಜ್ಞರು ಆಗಿರುವ ಎ.ಎಸ್.ಪೊನ್ನಣ್ಣ ನವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ರಾಜ್ಯ ರಾಜಕಾರಣದಲ್ಲಿ ಕೊಡಗಿನ ಮುಖಂಡರೊಬ್ಬರಿಗೆ ಇಂತಹ ಮಹತ್ವ ದೊರಕಿದ್ದು ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *