ಪ್ರಚಾರ ಬಯಸದ ಮೌನ ಸಾಧಕ ಕೆ.ಟಿ.ಗಟ್ಟಿ; ಡಾ | ಮೀನಾಕ್ಷಿ ರಾಮಚಂದ್ರ

ಸಮಗ್ರ ನ್ಯೂಸ್: ಪ್ರಚಾರ ಬಯಸದ ಸಹೃದಯಿ ಕೆ.ಟಿ. ಗಟ್ಟಿಯವರು ಮೌನವಾಗಿಯೇ ನಿರಂತರ ಸಾಧನೆಯಿಂದ ಸಾಹಿತ್ಯ ಲೋಕದ ತಾರೆಯಾದವರು ಎಂದು ಡಾ।ಮೀನಾಕ್ಷಿ ರಾಮಚಂದ್ರ ಅಭಿಪ್ರಾಯಪಟ್ಟರು.

. Ad Widget . Ad Widget

ನಮ್ಮನ್ನಗಲಿದ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿಯವರಿಗೆ, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕದಿಂದ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

. Ad Widget . . Ad Widget . Ad Widget

ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ, ರಘು ಇಡ್ಕಿದು, ಬೆನೆಟ್ ಜಿ. ಅಮ್ಮನ್ನ, ನುಡಿ ನಮನ ಸಲ್ಲಿಸಿದರು. ಕೇಂದ್ರ ಪರಿಷತ್ತು ಮಾರ್ಗದರ್ಶಿ ಸಮಿತಿಯ ಡಾ. ಮುರಲೀಮೋಹನ್ ಚೂಂತಾರು ಗೌರವ ನಮನ ಸಲ್ಲಿಸಿದರು.

ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಸಮಿತಿ ಸದಸ್ಯ ಬಿ. ಕೃಷ್ಣಪ್ಪ ನಾಯ್ಕ್ , ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ರತ್ನಾವತಿ ಜೆ. ಬೈಕಾಡಿ, ನಿಜಗುಣ ದೊಡ್ಡಮನಿ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *