ಸಮಗ್ರ ನ್ಯೂಸ್: ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸಂಘದ ವತಿಯಿಂದ ಕುರುಂಜಿಯವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಜಯನಗರ ಚೆಂಡೆಮೂಲೆ ಸರೋಜಾ ಆರ್ ಇವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಕೆವಿಜಿ ಹಬ್ಬದ ಅಧ್ಯಕ್ಷರು ಆದ ಚಂದ್ರಶೇಖರ್ ಪೇರಾಲ್ ಅಧ್ಯಕ್ಷತೆಯಲ್ಲಿ ಮನೆಯ ಹಸ್ತಾಂತರವನ್ನು ದೀಪ ಬೆಳಗಿಸುವ ಮೂಲಕ ಪದ್ಮಶ್ರೀ ಪುರಸ್ಕ್ರತ ಗಿರಿಶ್ ಭಾರದ್ವಾಜ್ ಇವರು ನೇರವೆರಿಸಿದರು.
ಹರಿಶ್ ಬಂಟ್ವಾಳ್ ಇವರು ಪ್ರಸ್ತಾವನೆಗೈದರು. ಮುಖ್ಯ ಅಥಿತಿಗಳಾಗಿ ಸುಧಾಕರ ನಗರ ಪಂಚಾಯತ್ ಮುಖ್ಯಾಧಿಕಾರಿ, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಕೊಡೆಂಕೇರಿ ಉಪಸಿತರಿದ್ದರು. ಕಾರ್ಯಕ್ರಮದಲ್ಲಿ ಅನಂದ ಖಂಡಿಗ, ಗಂಗಾಧರ ಮಟ್ಟಿ, ಸಂಘದ ಕಾರ್ಯದರ್ಶಿ ದಿನೇಶ್ ಅಂಬೆಕಲ್, ಕೊಶಾಧಿಕಾರಿ ಜನಾರ್ದನ್ ನಾಯ್ಕ್ ಇವರು ಉಪಸ್ತಿತರಿದ್ದರು. ಜ್ನಾನೇಶ್ ಎನ್.ಎ. ಸ್ವಾಗತಿಸಿ, ದಿನೇಶ್ ಅಂಬೆಕಲ್ ವಂದಿಸಿದರು.






