ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ರಾತ್ರಿ ಯಕ್ಷಗಾನ ಮೇಳ/ ಅನುಮತಿ ನೀಡಿದ ಹೈ ಕೋರ್ಟ್

ಸಮಗ್ರ ನ್ಯೂಸ್: ಕೋವಿಡ್ ಪೂರ್ವದಲ್ಲಿ ಚಾಲ್ತಿಯಲ್ಲಿದ್ದ ರೀತಿಯಲ್ಲಿ ಯಕ್ಷಗಾನ ನಡೆಸಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಯಕ್ಷಗಾನವು ರಾತ್ರಿ 12.30ರ ವರೆಗೆ ಮಾತ್ರ ನಡೆಸಬೇಕು ಮತ್ತು ನಿಗದಿತ ಶಬ್ದ ಪ್ರಮಾಣ (ಡೆಸಿಬಲ್) ಮೀರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತ ಕೃಷ್ಣಕುಮಾರ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

. Ad Widget . Ad Widget

ಯಕ್ಷಗಾನ ಮೇಳಗಳು ಸಂಜೆಯಿಂದ ಬೆಳಿಗ್ಗಿನವರೆಗೆ ಪ್ರದರ್ಶನಗಳನ್ನು ನೀಡುತ್ತವೆ. ಚೌಕಿ ಪೂಜೆ, ಪ್ರಾರ್ಥನೆ, ಆರತಿಯನ್ನು ಸಲ್ಲಿಸಿದ ನಂತರ ಯಕ್ಷಗಾನ ಆರಂಭವಾಗುವ ಹೊತ್ತಿಗೆ ರಾತ್ರಿ 9 ಆಗಿರುತ್ತದೆ. ರಾತ್ರಿ 12.30ರ ಒಳಗೆ ಯಕ್ಷಗಾನದ ಪೂರ್ಣ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

. Ad Widget . . Ad Widget . Ad Widget

ಇದೇ ಸಮಯದಲ್ಲಿ ಹೆಚ್ಚುವರಿ ಅಡ್ವಕೇಟ್ ಜನರಲ್, ಯಕ್ಷಗಾನ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದು, ಯಕ್ಷಗಾನ ಪ್ರದರ್ಶನದ ವೇಳೆ ಶಬ್ದ ಮಾಲಿನ್ಯ ನಿಯಮ-2000 ಸೇರಿದಂತೆ ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿದರು.

ಕೋವಿಡ್-19 ಪೂರ್ವದಲ್ಲಿ ಚಾಲ್ತಿಯಲ್ಲಿ ಇದ್ದಂತೆ ಯಕ್ಷಗಾನ ಪ್ರದರ್ಶನ ನೀಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಬೇಕು. ಅರ್ಜಿದಾರರು ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಕ್ತವಾಗಿರುತ್ತಾರೆ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *