ವಾಟ್ಸಾಪ್ ಪ್ಲಾಟ್‍ಫಾರ್ಮ್ ವಿರುದ್ಧ ನಿಂದನೆ/ 75 ಲಕ್ಷ ಖಾತೆಗಳನ್ನು ನಿಷೇಧಿಸಿದ ಮೆಟಾ

ಸಮಗ್ರ ನ್ಯೂಸ್: ವಾಟ್ಸಾಪ್ ಪ್ಲಾಟ್‍ಫಾರ್ಮ್ ವಿರುದ್ಧದ ನಿಂದನೆಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮೆಟಾ-ಮಾಲೀಕತ್ವದ ವಾಟ್ಸಾಪ್ 75 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ.

Ad Widget ... ..

75,48,000 ವಾಟ್ಸಾಪ್ ಖಾತೆಗಳನ್ನು ಅಕ್ಟೋಬರ್ 1 ಮತ್ತು ಅಕ್ಟೋಬರ್ 31ರ ನಡುವೆ ನಿಷೇಧಿಸಲಾಗಿದ್ದು, ಈ ಪೈಕಿ 19,19,000 ಬಳಕೆದಾರರನ್ನು ಈಗಾಗಲೇ ದೂರುಗಳಿಂದ ನಿಷೇಧಿಸಲಾಗಿದೆ ಎಂದು ಕಂಪನಿಯು ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

Ad Widget

ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ಆಗಿರುವ ವಾಟ್ಸಾಪ್ ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಅಕ್ಟೋಬರ್‍ನಲ್ಲಿ ದೇಶದಲ್ಲಿ 9,063 ದೂರು ವರದಿಗಳನ್ನು ಸ್ವೀಕರಿಸಿದೆ.

Leave a Comment

Your email address will not be published. Required fields are marked *