ದಸರಾದಲ್ಲಿ‌ ಏರ್ ಶೋ/ ಮೈಸೂರಿನಲ್ಲಿ ಲೋಹದ ಹಕ್ಕಿಗಳ ಕಲರವ

ಸಮಗ್ರ ನ್ಯೂಸ್: ಅರಮನೆ ನಗರಿಯ ಈ ಸಲದ ದಸರಾದಲ್ಲಿ ಲೋಹದ ಹಕ್ಕಿಗಳ ಕಲರವ ಕಂಡುಬರಲಿದೆ. ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್‌ಶೋ ನಡೆಯುತ್ತಿದ್ದು, ಅಕ್ಟೋಬರ್ 22 ಮತ್ತು 23ರಂದು ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿ ಬಾನಂಗಣದಲ್ಲಿ ಲೋಹದ‌ ಹಕ್ಕಿಗಳ ಹಾರಾಟ ನಡೆಯಲಿದೆ. ಅಕ್ಟೋಬರ್ 22ರಂದು ಏರ್‌ಶೋ ರಿಹರ್ಸಲ್ ನಡೆದು, ಮರುದಿನ ಆಕ್ಟೋಬರ್ 23 ರಂದು ಸಂಜೆ 4 ಗಂಟೆಗೆ 45 ನಿಮಿಷಕ್ಕೆ ಮುಖ್ಯ ಏರ್‌ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

. Ad Widget . Ad Widget . Ad Widget .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಿಕೊಡಲು ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದ್ದು. ಈಗಾಗಲೇ ಸ್ಥಳ ಕೂಡ ಪರಿಶೀಲನೆ ನಡೆಸಲಾಗಿದೆ. ಯುದ್ಧ ವಿಮಾನಗಳ ಹಾರಾಟ ಸೇರಿದಂತೆ ಯಾವ್ಯಾವ ವಿಮಾನಗಳು ಪ್ರದರ್ಶನ ನಡೆಯಲಿದೆ ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಅವರು ತಿಳಿಸಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *