ಗುಡಿಸಲಿಗೆ ನುಗ್ಗಿದ ಟ್ರಕ್… ಕಾರ್ಮಿಕರು ಸಾವು

ಸಮಗ್ರ ನ್ಯೂಸ್: ಕೂಲಿ ಕಾರ್ಮಿಕರೇ ಹಾಗೇ ತಮ್ಮ ಜೀವನ ಕಟ್ಟಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆ ವಲಸೆ ಹೋಗುತ್ತಿರುತ್ತಾರೆ. ಅದರೆ ದುರ್ವಿಧಿ ನೋಡಿ ಸೋಮವಾರ ಮುಂಜಾನೆ ನಡೆದ ಭಯಾನಕ ಅಪಘಾತವೊಂದರಲ್ಲಿ ಅಮಾಯಕ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅತಿ ವೇಗದಿಂದ ಬಂದ ಟ್ರಕ್‌ವೊಂದು ಗುಡಿಸಲಿಗೆ ನುಗ್ಗಿದ ಪರಿಣಾಮ ಗುಡಿಸಲಿನಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Ad Widget ... ..

ಅಂದಹಾಗೆ ಮೃತ ಕಾರ್ಮಿಕರೆಲ್ಲ ಮಧ್ಯಪ್ರದೇಶ ಮೂಲದವರಾಗಿದ್ದು, ರಸ್ತೆ ಕಾಮಗಾರಿ ನಿಮಿತ್ತ ನಂದೂರಕ್ಕೆ ತೆರಳಿ ರಸ್ತೆ ಬದಿ ನಿರ್ಮಿಸಿದ್ದ ಗುಡಿಸಲಿನಲ್ಲಿ ಮೊರಗಡ ತಾಲೂಕು ಚಿಕಲದಾರದ 10 ಕೂಲಿ ಕಾರ್ಮಿಕರು ಮಲಗಿದ್ದರು. ಬುಲ್ಧಾನ ತಾಲೂಕಿನ ಮಲ್ಕಾಪುರದಿಂದ ನಂದೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಂ.6ರಲ್ಲಿ ಈ ಅಪಘಾತ ಸಂಭವಿಸಿದೆ.

Ad Widget

Leave a Comment

Your email address will not be published. Required fields are marked *