ಸೀಬೆ ಹಣ್ಣಿನ ಎಲೆ ಹಲವು ರೋಗಗಳಿಗೆ ರಾಮಬಾಣ

ಸಮಗ್ರ ನ್ಯೂಸ್: ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ.

Ad Widget ... ..

ಸೀಬೆ ಎಲೆಗಳನ್ನು ಕುದಿಸಿದ ಟೀ ಮೂರು ತಿಂಗಳವರೆಗೆ ಸತತವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರಾಯ್ಡ್ ಎಂಬ ವಿಷ ವಸ್ತುಗಳನ್ನು ಕಡಿಮೆಗೊಳಿಸಬಹುದು.
ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಅತಿಸಾರ ಮತ್ತು ಆಮಶಂಕೆಯನ್ನು ನಿವಾರಿಸಲು ಸೀಬೆ ಎಲೆಗಳ ಮಿಶ್ರಣ ಒಂದು ಉತ್ತಮ ಆಯುರ್ವೇದ ಔಷಧಿಯಾಗಿದೆ.

Ad Widget

ಸೀಬೆ ಎಲೆಗಳ ಮಿಶ್ರಣದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಹಲವು ಪೋಷಕಾಂಶಗಳಿವೆ. ಸೀಬೆ ಎಲೆಗಳ ಕಷಾಯ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ. ತೂಕ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

Leave a Comment

Your email address will not be published. Required fields are marked *