ಡಾ.ಬ್ರೋ ಈಗ “ಮ್ಯಾನ್ ಆಪ್ ಮಿಲಿಯನ್ಸ್”| 20 ಲಕ್ಷ SUBSCRIBERS ಪಡೆದ ಕನ್ನಡ ಹುಡುಗ

ಸಮಗ್ರ ನ್ಯೂಸ್: ‘ನಮಸ್ಕಾರ ದೇವ್ರು’ ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ. ಬ್ರೋ (ಗಗನ್ ಶ್ರೀನಿವಾಸ್​) ಈಗ ಮ್ಯಾನ್ ಆಫ್ ಮಿಲಿಯನ್ಸ್ ಆಗಿದ್ದಾರೆ. ಅರ್ಥಾತ್, ಯೂ-ಟ್ಯೂಬ್​ನಲ್ಲಿ ಅವರ ಸಬ್​ಸ್ಕ್ರೈಬರ್ಸ್​ ಸಂಖ್ಯೆ 2 ಮಿಲಿಯನ್ (20) ಲಕ್ಷ ಆಗಿದೆ. ಜೊತೆಗೆ ಅವರ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲೂ ಫಾಲೋವರ್ಸ್ ಸಂಖ್ಯೆ ಈಗಾಗಲೇ ಮಿಲಿಯನ್ ದಾಟಿದೆ.

Ad Widget ... ..

ಇತ್ತೀಚೆಗಷ್ಟೇ ಯೂಟ್ಯೂಬ್​ನಲ್ಲಿ 2 ಮಿಲಿಯನ್ ಸಬ್​ಸ್ಕ್ರೈಬರ್ಸ್​ ಹೊಂದಿದ ಡಾ.ಬ್ರೋ, ಫೇಸ್​ಬುಕ್​ನಲ್ಲಿ 1.6 ಮಿಲಿಯನ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ 1.3 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ. ಇನ್ನೊಂದೆಡೆ ಎಕ್ಸ್​ನಲ್ಲೂ ಇತ್ತೀಚೆಗೆ ಸಕ್ರಿಯರಾಗಿರುವ ಅವರಿಗೆ ಅಲ್ಲಿಯೂ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗುತ್ತಿದೆ.

Ad Widget

ಕಳೆದ ವರ್ಷ ಡಿಸೆಂಬರ್​ನಲ್ಲಿ ಯೂಟ್ಯೂಬ್​ನಲ್ಲಿ ಡಾ.ಬ್ರೋ ಸಬ್​ಸ್ಕ್ರೈಬರ್ಸ್ ಸಂಖ್ಯೆ 1 ಮಿಲಿಯನ್ ದಾಟಿತ್ತು. ಅದಾಗಿ 8 ತಿಂಗಳು ಕಳೆಯುವಷ್ಟರಲ್ಲಿ ಇನ್ನೂ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್ ಹೊಂದಿರುವ ಗಗನ್ ಶ್ರೀನಿವಾಸ್, ಯೂಟ್ಯೂಬ್​ನಲ್ಲೀಗ 2 ಮಿಲಿಯನ್ ಸಬ್​ಸ್ಕ್ರೈಬರ್​ಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಬ್ರೋ ಕ್ರೇಝ್ ಹೆಚ್ಚಾಗಿರುವುದು ಕೂಡ ಕಂಡುಬಂದಿದೆ.

Leave a Comment

Your email address will not be published. Required fields are marked *