ಕೊಡಗು: ಅಕ್ರಮ ಗಾಂಜಾ ಮಾರಾಟ| 9. ಕೆ.ಜಿ ಗಾಂಜಾ, 6.2 ಗ್ರಾಂ ಎಂ.ಡಿ.ಎಂ.ಎ. ಮಾದಕವಸ್ತು ಪತ್ತೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಪತ್ತೆ ಮಾಡಿದೆ.

. Ad Widget . Ad Widget . Ad Widget .

ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿತರಿಂದ 9 ಕೆ.ಜಿ 500 ಗ್ರಾಂ ಗಾಂಜಾ ಮತ್ತು 6.2 ಗ್ರಾಂ ಎಂ.ಡಿ.ಎಂ.ಎ. ಮಾದಕವಸ್ತು, ನಗದು, ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್‌ ಪೋನ್‌, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಆರ್.ವಿ.ಗಂಗಾಧರಪ್ಪ, ಡಿವೈಎಸ್‌ಪಿ, ಸೋಮವಾರಪೇಟೆ ಉಪ ವಿಭಾಗ, ಮಹೇಶ್.ಬಿ.ಜಿ, ಸಿಪಿಐ, ಕುಶಾಲನಗರ ವೃತ್ತ ಹಾಗೂ ಮೋಹನ್‌ರಾಜು ಪಿ., ಪಿಎಸ್‌ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಪತ್ತೆ ಮಾಡಿದ್ದು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಕಳೆದ ಎರಡು ದಿನಗಳಲ್ಲಿ 5 ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ಯಶಸ್ವಿಯಾಗಿದ್ದು ಒಟ್ಟು 17 ಆರೋಪಿಗಳನ್ನು ಬಂಧಿಸಿ 13.5 ಕೆ.ಜಿ ಗಾಂಜಾ, 19.5 ಗ್ರಾಂ MDMA ಮಾದಕ ವಸ್ತು, ನಗದು, ಕೃತ್ಯಕ್ಕೆ ಉಪಯೋಗಿಸಿದ 14 ಮೊಬೈಲ್‌ ಫೋನ್‌ಗಳು, 1 ಕಾರು, 2 ಆಟೋ ರಿಕ್ಷಾ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪ್ರಶಂಶಿಸಲಾಗಿದೆ.

Leave a Comment

Your email address will not be published. Required fields are marked *