ಕೊಡಗು: ವಿಶ್ವ ಹಿಂದೂ ಪರಿಷತ್ ಮುಖಂಡನಿಗೆ ನಕ್ಸಲ್ ಬೆದರಿಕೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ವಕೀಲ ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಬಂದಿದ್ದು ಬೆದರಿಕೆ ಪತ್ರ ಕೊನೆಯಲ್ಲಿ ನಕ್ಸಲ್ ಬಾರಿ ಜಿಂದಾಬಾದ್ ಎಂಬ ಪದ ಉಲ್ಲೇಖವಾಗಿದ್ದು ಈ ಬಗ್ಗೆ ಕೃಷ್ಣಮೂರ್ತಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ad Widget ... ..

ಪೋಸ್ಟ್ ನಲ್ಲಿ ಬೆದರಿಕೆ ಪತ್ರ ಬಂದಿದ್ದು ಈ ಪತ್ರ ಓದಲು ನೀನು ಬದುಕಿರುವುದಕ್ಕೆ ಅಭಿನಂದನೆ ಗೌರಿ ಕೊಂದವರಿಗೆ ನಮ್ಮ ಸರಕಾರ ಇದ್ದಾಗ ಶಿಕ್ಷೆ ನೀಡಿದ್ದೇವೆ ಆರೋಪಿತರ ಬಿಡುಗಡೆ ಪ್ರಯತ್ನ ತಕ್ಷಣ ನಿಲ್ಲಿಸು ಇದಕ್ಕಾಗಿ ಕೊಟ್ಟ ಎಚ್ಚರಿಕೆ ವಿಫಲ ಆಗಿದ್ದಕ್ಕೆ ಖುಷಿ ಬೇಡ ಇದು ನಾವು ಕೊಟ್ಟ ಎಚ್ಚರಿಕೆ ಅಷ್ಟೇ ತಕ್ಷಣ ನೀನು ಹಿಂದೆ ಸರಿಯದಿದ್ದರೆ ಮಣ್ಣನ್ನು ಕೆಂಪಾಗಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ. ಗುರುವಾರ ಪೋಸ್ಟ್ ನಲ್ಲಿ ಕೃಷ್ಣಮೂರ್ತಿ ಅವರಿಗೆ ಪತ್ರ ತಲುಪಿದೆ ಈ ಹಿಂದೆ ಏಪ್ರಿಲ್ 12ರಂದು ಕೃಷ್ಣಮೂರ್ತಿ ಅವರು ಬೆಳಿಗ್ಗೆ ತಮ್ಮ ಮನೆಯಿಂದ ಕಚೇರಿಗೆ ತೆರಳುವ ಸಂದರ್ಭದಲ್ಲಿ ಗುಂಡಿನದಾಳಿ ನಡೆದಿದ್ದು ಗುಂಡಿನ ದಾಳಿಯಲ್ಲಿ ಕೃಷ್ಣಮೂರ್ತಿ ಪಾರಾಗಿದ್ದರು.

Ad Widget

ವಕೀಲರಾಗಿರುವ ಕೃಷ್ಣಮೂರ್ತಿಯವರು ಗೌರಿ ಲಂಕೇಶ್ ಹತ್ಯ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *