ಮಂಗಳೂರು: ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ| ಗಾಯಾಳು ಗಂಭೀರ

ಸಮಗ್ರ ನ್ಯೂಸ್: ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.3 ರ ತಡರಾತ್ರಿ ನಡೆದಿದೆ.

. Ad Widget . Ad Widget

ಉಳ್ಳಾಲ ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಎಂಬಾತನ ಮೇಲೆ ದಾಳಿ ನಡೆಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

. Ad Widget . . Ad Widget . Ad Widget

ಆರೋಪಿಗಳನ್ನು ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂದು ‌ಗುರುತಿಸಲಾಗಿದ್ದು, ಇವರ ಜೊತೆಗೆ ಇನ್ನೂ ಇಬ್ಬರು ಸೇರಿಕೊಂಡಿದ್ದರು ಎನ್ನಲಾಗಿದೆ. ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಸದಕತ್ತುಲ್ಲಾ ಮನೆಯಲ್ಲಿದ್ದ ಸಂದರ್ಭ ಎದುರುಗಡೆ ಕರೆಸಿ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ. ಫಿಶ್ ಆಯಿಲ್ ಮಿಲ್ ಮಾಲೀಕರಿಂದ ಬೆದರಿಸಿ ಹಣ ಪಡೆದಿರುವ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯವಿತ್ತು. ಕೆಲ ತಿಂಗಳುಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳ ಪೈಕಿ ಓರ್ವನಿಗೆ ಸದಕತ್ತುಲ್ಲಾ ತಂಡ ಹಲ್ಲೆ ನಡೆಸಿತ್ತು.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ

Leave a Comment

Your email address will not be published. Required fields are marked *