ಅಂಗನವಾಡಿಯಲ್ಲಿ ಕುಕ್ಕರ್ ಸ್ಪೋಟ; ಇಬ್ಬರು ಮಕ್ಕಳಿಗೆ ಗಾಯ

ಸಮಗ್ರ ನ್ಯೂಸ್: ಅಂಗನವಾಡಿಯಲ್ಲಿ ಅಡುಗೆ ಮಾಡುವ ವೇಳೆ ಕುಕ್ಕರ್ ಸ್ಫೋಟವಾಗಿ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದ ಸಮೀಪದ ಬ್ಯಾಡಗಿ ವಸ್ತಿಯಲ್ಲಿ ನಡೆದಿದೆ.

. Ad Widget . Ad Widget . Ad Widget

ಸಮರ್ಥ (2), ಅದ್ವೀಕ್ (4) ಗಾಯಗೊಂಡ ಬಾಲಕರು. ಅಂಗನವಾಡಿಯಲ್ಲಿ ಬುಧವಾರ ಕುಕ್ಕರ್‌ ಬ್ಲಾಸ್ಟ್‌ ಆಗಿದೆ. ಈ ವೇಳೆ ಗಾಬರಿಯಿಂದ ಮಕ್ಕಳು ಹೊರಕ್ಕೆ ಓಡುವಾಗ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಜಮಖಂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

. Ad Widget .

ಈ ಬಗ್ಗೆ ಜಮಖಂಡಿ ಸಿಡಿಪಿಒ ಅನುರಾಧ ಹಾದಿಮನಿ ಪ್ರತಿಕ್ರಿಯಿಸಿ, ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. ಕುಕ್ಕರ್ ಬ್ಲಾಸ್ಟ್‌ನಿಂದ ಅವರಿಗೆ ಗಾಯವಾಗಿಲ್ಲ. ಬ್ಲಾಸ್ಟ್ ಆದಮೇಲೆ ಗಾಬರಿಗೊಂಡು ಓಡುವಾಗ ಬಿದ್ದು ಗಾಯಗೊಂಡಿದ್ದಾರೆ. ಇದೇ ವೇಳೆ ಕುಕ್ಕರ್ ಹವೆ ತಾಗಿ ಅಡುಗೆ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *