ಸುಳ್ಯ: ಯುವ ಉದ್ಯಮಿಯ ಕಿಡ್ನಾಪ್?

ಸಮಗ್ರ ನ್ಯೂಸ್: ಬೆಳ್ಳಾರೆಯ ಯುವ ಉದ್ಯಮಿಯೋರ್ವರನ್ನು ಅಪರಿಚಿತ ತಂಡವೊಂದು ಕಿಡ್ನಾಪ್ ಮಾಡಿರುವ ಬಗ್ಗೆ ವರದಿಯಾಗಿದೆ.

. Ad Widget . Ad Widget . Ad Widget

ಮನೆಗೆ ಬಂದ ಅಪರಿಚಿತ ತಂಡವೊಂದು ಕಾಮಧೇನು ಜ್ಯುವೆಲ್ಲರ್ ನ ಮಾಲೀಕ ಉದ್ಯಮಿ ನವೀನ್ ಮಲ್ಲಾರರನ್ನು ಕಿಡ್ನಾಪ್ ಮಾಡಿದ್ದು, ಅವರ ತಾಯಿಯನ್ನು ತಳ್ಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

. Ad Widget .

ಕೇರಳ ಮೂಲದ ಅಂಬ್ಯುಲೆನ್ಸ್ ನಲ್ಲಿ ದುಷ್ಕರ್ಮಿಗಳು ಬಂದಿರುವುದಾಗಿ ಹೇಳಲಾಗುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.

ಉದ್ಯಮಿ ನವೀನ್ ಅವರ ತಾಯಿ ನೀರಜಾರವರು ಪ್ರತಿಕ್ರಿಯೆ ನೀಡಿದ್ದು, ”ಮಗನನ್ನು ನನ್ನ ಕಣ್ಣೆದುರೇ ಎಳೆದೊಯ್ಯಲಾಗಿದೆ. ನನಗೆ ಮಗ ಬೇಕು” ಎಂದಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಲು ತಾಯಿ‌ ನೀರಜಾ ಹೋದರಾದರೂ ಪೊಲೀಸರು ಹೇಳಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೀರಜಾರವರು ಆರೋಪಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *