ನೀವು ಡಯಾಬಿಟಿಸ್ ನಿಂದ‌ ದೂರವಿದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ; ಡಯಾಬಿಟಿಕ್ ಫ್ರೀ ಆಗಿರಿ…

ಸಮಗ್ರ ನ್ಯೂಸ್: ಮಧುಮೇಹ ಅನ್ನೋದು ಇಂದು ಕಾಮನ್‌ ಖಾಯಿಲೆಯಾದರೂ ಅದು ಬಹಳ ಅಪಾಯಕಾರಿ. ರಕ್ತದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕಣ್ಣು ಮತ್ತು ಮೂತ್ರಪಿಂಡಗಳಂತಹ ನಮ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.

Ad Widget ... ..

ಇನ್ನು ನೀವು ಪ್ರಿ-ಡಯಾಬಿಟಿಕ್ ಅಥವಾ ಪೂರ್ವ ಮಧುಮೇಹಿಗಳಾಗಿದ್ದರೆ, ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದ್ದರೂ ಅದು ಬಾರ್ಡರ್‌ ಅಂಚಿನಲ್ಲಿರುವ ಕಾರಣ ನೀವು ಮಧುಮೇಹಿ ಅಂತ ಅನ್ನಿಸಿಕೊಂಡಿರುವುದಿಲ್ಲ. ಆದ್ರೆ ಮಧುಮೇಹ ಪೂರ್ವ ಸ್ಥಿತಿಯಲ್ಲಿರುವಾಗ ಯಾವಾಗ ಬೇಕಾದರೂ ಹೆಚ್ಚಾಗಬಹುದು. ಆದ್ದರಿಂದ ನೀವು ನಿಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಾಗಿರುವುದು ಅತ್ಯಂತ ಅಗತ್ಯ.

Ad Widget

ನೀವು ಪೂರ್ವ ಮಧುಮೇಹಿಗಳಾಗಿದ್ದಲ್ಲಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಈ 5 ಆಹಾರ ಪದಾರ್ಥಗಳ ಸೇವನೆಯಿಂದ ದೂರವಿದ್ದರೆ ನೀವು ಮಧುಮೇಹದಿಂದಲೂ ದೂರವಿರಬಹುದು.

ಸಿಹಿ ತಿಂಡಿಗಳಿಗೆ ನೋ ಹೇಳಿ:
ನೀವು ಪ್ರೀ ಡಯಾಬಿಡಿಕ್‌ ಆಗಿದ್ದರೆ ಸಿಹಿತಿಂಡಿಗಳನ್ನು ತ್ಯಜಿಸುವ ನಿರ್ಧಾರ ಕೈಗೊಳ್ಳಲೇಬೇಕು. ಸಾಂಪ್ರದಾಯಿಕ ದೇಸಿ ಮಿಠಾಯಿ, ಪೇಸ್ಟ್ರಿಗಳು, ಕುಕೀಗಳು, ಕೇಕ್‌, ಮಿಠಾಯಿ,ಲಡ್ಡು, ಡೋನಟ್‌ ಮುಂತಾದವುಗಳಿಗೆ ನೋ ಹೇಳಲೇಬೇಕು. ಈ ಸಿಹಿತಿಂಡಿಗಳು ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಸಂಗ್ರಹಿಸುವುದಲ್ಲದೇ ಇನ್ಸುಲಿನ್, ಹಾರ್ಮೋನುಗಳ ಉತ್ಪಾದನೆಯ ಮೇಲೂ ಪ್ರಭಾವ ಬೀರುತ್ತವೆ.

ಸಿಹಿಯಾದ ಪಾನೀಯ ಸೇವನೆ ಬೇಡ:
ಪ್ಯಾಕ್ ಮಾಡಲಾದ ಪಾನೀಯಗಳು, ಕೂಲ್‌ ಡ್ರಿಂಕ್ಸ್‌ ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ ಇದು ಆರೋಗ್ಯಕ್ಕೆ ಅಷ್ಟೇ ಕೆಟ್ಟದ್ದು. ಇಂತಹ ಪಾನೀಯಗಳು ರಕ್ತದಲ್ಲಿನ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗಿದೆ. ಆರೋಗ್ಯಕ್ಕೆ ಬೇಕಾಗುವಂಥ ಫೈಬರ್‌ ಆಗಲೀ, ಪ್ರೋಟೀನ್‌ ಆಗಲಿ ಅಥವಾ ಇನ್ಯಾವುದೇ ಪೌಷ್ಠಿಕಾಂಶಗಳನ್ನು ಹೊಂದಿರೋದಿಲ್ಲ. ಅಲ್ಲದೇ ಇವು ನಿಮ್ಮ ಜೀರ್ಣವ್ಯವಸ್ಥೆಯನ್ನೂ ನಿಧಾನಗೊಳಿಸುತ್ತವೆ. ನೀವು ಪೂರ್ವ-ಮಧುಮೇಹಿಗಳಾಗಿದ್ದರೆ ಅಂಥ ಪ್ಯಾಕ್ಡ್‌ ಕೂಲ್‌ ಡ್ರಿಂಕ್ಸ್‌ ಗಳು, ಜ್ಯೂಸ್‌ ಗಳು ಹಾಗೂ ಸಿಹಿಯಾದ ಕೇಫೀನ್‌ ಹೊಂದಿರುವ ಪಾನೀಯಗಳಿಂದ ದೂರವಿರಬೇಕು.

ಫಾಸ್ಟ್ ಫುಡ್ ಗೆ ಬ್ರೇಕ್ ಹಾಕಿ:
ಫಾಸ್ಟ್‌ ಫುಡ್‌ ಸೇವನೆ ಎಷ್ಟು ರುಚಿಕರವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಫಾಸ್ಟ್-ಫುಡ್ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೇ, ಇನ್ಸುಲಿನ್ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಪಿಜ್ಜಾ, ಬರ್ಗರ್‌, ಬೇಕರಿ ತಿಂಡಿಗಳು, ಫ್ರೈಸ್‌ ಗಳು ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚು ಮಾಡುತ್ತದೆ.

ಉಪಹಾರದ ಧಾನ್ಯಗಳನ್ನು ಎಚ್ಚರಿಕೆಯಿಂದ ಆರಿಸಿ:
ಕೆಲವಷ್ಟು ಆಹಾರಗಳು ಮಾಡಲು ಸುಲಭ ಎಂದು ಅವುಗಳನ್ನು ನೀವು ಆಯ್ಕೆ ಮಾಡಬಹುದು. ಆದ್ರೆ ನೀವು ನೆನಪಿಡಬೇಕಾದ ಮುಖ್ಯ ಅಂಶಗಳೆಂದರೆ ಹೆಚ್ಚಿನ ಪ್ಯಾಕ್ ಮಾಡಲಾದ ಧಾನ್ಯಗಳನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಜೊತೆಗೆ ಅವುಗಳಿಗೆ ಸಕ್ಕರೆಯನ್ನು ಸೇರಿಸಲಾಗಿರುತ್ತದೆ. ಹೆಚ್ಚಿನ ಜನಪ್ರಿಯ ಧಾನ್ಯಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ನೀವು ಪ್ರೀ ಡಯಾಬಿಟಿಕ್‌ ಆಗಿದ್ದರೆ ಪಾಕ್ಡ್‌ ಫುಡ್‌ ಸೇವನೆಯನ್ನು ಆದಷ್ಟೂ ತಪ್ಪಿಸಿ.

ಸಂಸ್ಕರಿಸಿದ ಧಾನ್ಯಗಳನ್ನು ತಿರಸ್ಕರಿಸಿ:
ಬಿಳಿ ಬ್ರೆಡ್, ಬಿಳಿ ಅಕ್ಕಿ ಮತ್ತು ಮೈದಾದಿಂದ ಮಾಡಿರುವ ಪಾಸ್ಟಾ ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತವೆ. ನೀವು ಮಧುಮೇಹದಿಂದ ಪಾರಾಗಬೇಕು ಎಂದಿದ್ದರೆ ಅವುಗಳ ಬದಲಿಗೆ ಬ್ರೌನ್ ಬ್ರೆಡ್, ಬ್ರೌನ್ ರೈಸ್ ಮತ್ತು ಗೋಧಿ ಪಾಸ್ಟಾಗಳಿಗೆ ಬದಲಾಯಿಸಿ.

Leave a Comment

Your email address will not be published. Required fields are marked *