ಬೇಕರಿ ಹುಡುಗರ ಮೇಲೆ ಹಲ್ಲೆ; ಮೂವರು ಪರೋಡಿಗಳು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನ‌ ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಬೇಕರಿ ಬಳಿ ಗಲಾಟೆ ಪ್ರಕರಣ ಸಂಬಂಧ ಮೂವರು ಅರೆಸ್ಟ್ ಆಗಿದ್ದಾರೆ. ಕಾರ್ತಿಕ್, ಕಾರ್ತಿಕ್, ಸಲ್ಮಾನ್ ಈ ಮೂವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಗರೇಟ್ ಕೇಳಿ ಬೇಕರಿ ಹುಡುಗರ ಜೊತೆ ತಗಾದೆ ತೆಗೆದು ಪುಂಡಾಟಿಕೆ ಮಾಡಿದ್ದಾರೆ.

Ad Widget ... ..

ಈ ಘಟನೆ ಗುರುವಾರ ತಡರಾತ್ರಿ ಬೆಂಗಳೂರಿನ ಎಚ್ ಎ ಎಲ್ ಕುಂದನಹಳ್ಳಿ ಬಳಿ ನಡೆದಿದೆ. ಪುಂಡರು ಮಾತಿಗೆ ಮಾತು ಬೆಳೆಸಿ ಬೇಕರಿಯನ್ನು ಧ್ವಂಸಗೊಳಿಸಿದರು. ಸಿಗರೇಟ್ ಕೇಳೋ ನೆಪದಲ್ಲಿ ಬಂದು ಗ್ಯಾಂಗ್ ವಾಗ್ವಾದಕ್ಕೆ ಇಳಿದು, ಊರ್ ಬಿಟ್ಟು ಊರ್ ಬಂದಿದ್ದೀರಾ, ನಮ್ಗೆ ಆವಾಜಾ ಎಂದು ಪುಂಡರು ಹೇಳಿದ್ದಾರೆ.

Ad Widget

ನಂತರ ಸಿಕ್ಕಸಿಕ್ಕ ವಸ್ತುಗಳನ್ನು ಚೆಲ್ಲಾಡಿ ಬೇಕರಿ ಹುಡುಗರಿಗೆ ಥಳಿಸಿದ್ದಾರೆ. ಸದ್ಯ, ಎಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೂಂಡಾ ವರ್ತನೆ ತೋರಿದ ಪುಂಡರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಈ ಪ್ರಕರಣವಾಗಿ ಪ್ರತಿಭಟನೆ ನಡೆಯಿತು. ಈ ವೇಳೆ ಯುವಕ ಪ್ರಜ್ವಲ್ ಹಲ್ಲೆಗೊಳಗಾಗಿ ಪೊಲೀಸ್ ಸ್ಟೇಷನ್ ಮುಂಭಾಗದಲ್ಲೇ‌ ಕುಸಿದು ಬಿದ್ದಿದ್ದ. ಯುವಕನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Comment

Your email address will not be published. Required fields are marked *