ಕತಾರ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಫಹದ್ ಸಾವು

ಸಮಗ್ರ ನ್ಯೂಸ್: ಕತಾರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

Ad Widget ... ..

ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹದ್ ಮೃತಪಟ್ಟ ಯುವಕ. ಈತ
ಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ ಕಾರಣದಿಂದ ಊರಿಗೆ ಬಂದು ಒಂದು ವರ್ಷ ಕಾಲ ಊರಿನಲ್ಲೇ ಚಾಲಕ ವೃತ್ತಿ ಮಾಡುತ್ತಿದ್ದ.

Ad Widget

ಬಳಿಕ ಕಳೆದ ಐದು ತಿಂಗಳ ಹಿಂದೆ ಕತಾರಿಗೆ ತೆರಳಿದ್ದ. ಮಂಗಳವಾರ ರಾತ್ರಿ ಅಪಘಾತ ನಡೆಯುವ ಸ್ವಲ್ಪ ಮುಂಚೆಯಷ್ಟೆ ದೂರವಾಣಿ ಕರೆ ಮಾಡಿ ಮನೆ ಮಂದಿ ಜೊತೆ ಮಾತನಾಡಿ ಸುಖ-ದುಃಖ ಹಂಚಿಕೊಂಡಿದ್ದ. ಆ ಬಳಿಕ ಅಪಘಾತದ ಸುದ್ದಿ ಕೇಳಿ ಮನೆ ಮಂದಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಫಹದ್ ಅವರ ತಂದೆಯೂ ಟಿಪ್ಪರ್ ಚಾಲಕನಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ತಂದೆ , ತಾಯಿ ಹಾಗೂ ತಮ್ಮನನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *