ಮದರಸಾ ಅಧ್ಯಯನ ಪ್ರಾಥಮಿಕ ವರದಿ ಬಹಿರಂಗ| ಗಾಬರಿಗೊಳಗಾದ ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಸಮಿತಿಯನ್ನು ರಚಿಸಿದ್ದು, ಸದಸ್ಯರು ನೀಡಿರುವ ಪ್ರಾಥಮಿಕ ಹಂತದ ವರದಿಗೆ ಶಿಕ್ಷಣ ಸಚಿವರೇ ಗಾಬರಿ ಆಗಿದ್ದಾರೆ. ಖುದ್ದು ಶಿಕ್ಷಣ ಸಚಿವರೇ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ಕೆಲವು ಮದರಸಾದಲ್ಲಿ ಕಲಿಯಲು ಸೇರಿಕೊಂಡಿದ್ದ ಮಕ್ಕಳು ಎಲ್ಲಿ ಹೋಗಿದ್ದಾರೆ ಎಂಬುದೇ ತಿಳಿದಿಲ್ಲ ಎಂದಿದ್ದಾರೆ.

Ad Widget ... ..

ಮದರಸಾಗಳಲ್ಲಿ ಮಕ್ಕಳ ದಾಖಲಾತಿ ಇರುತ್ತದೆ, ಆದರೆ ಮಕ್ಕಳು ಮದರಸಾಗಳಲ್ಲಿಯೇ ಇರುವುದಿಲ್ಲ ಎಂಬ ಅಚ್ಚರಿಯ ಅಂಶವನ್ನು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಜತೆಗೆ ಕೆಲ ಮದರಸಾಗಳಲ್ಲಿ ಮಕ್ಕಳು ಕೂರಲು ಮಾತ್ರವಲ್ಲ ನಿಲ್ಲಲೂ ಜಾಗವಿಲ್ಲದಷ್ಟು ಕಿರಿದಾಗಿದೆ. ಹೀಗಾಗಿ ಪೂರ್ಣ ವರದಿಯನ್ನು ನೀಡುವಂತೆ ಸಮಿತಿ ಸದಸ್ಯರಿಗೆ ಹೇಳಿದ್ದಾನೆ ಎಂದಿದ್ದಾರೆ.

Ad Widget

ಏನಿದು ಮದರಸಾ ಅಧ್ಯಯನ?
ರಾಜ್ಯದಲ್ಲಿ ಕೆಲವೊಂದು ಮದರಸಾಗಳು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಆಪಾದನೆಗಳಿದ್ದು, ಅವುಗಳನ್ನು ನಿಷೇಧಿಸಬೇಕು ಎಂದು ಇತ್ತೀಚೆಗೆ ಹಿಂದೂ ಸಂಘಟನೆಗಳ ಮುಖಂಡರು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರು. ಜತೆಗೆ ಮದರಸಾಗಳಲ್ಲಿ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಎಂದು ಪೋಷಕರಿಂದಲೂ ದೂರು ಬಂದಿದ್ದವು.

ಹೀಗಾಗಿ ಶಿಕ್ಷಣ ಇಲಾಖೆಯು ಮದರಸಾಗಳನ್ನು ಗಂಭೀರವಾಗಿ ಪರಿಗಣಿಸಿ ಮದರಸಾಗಳ ಕುರಿತು ಅಧ್ಯಯನಕ್ಕೆ ಮುಂದಾಗಿತ್ತು. ಧಾರವಾಡದ ಡಿಡಿಪಿಐ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಈ ಸಮಿತಿ ಮದರಸಾಗಳ ಸಮಗ್ರ ಚಟುವಟಿಕೆ ಕುರಿತು ವರದಿ ನೀಡಲಿದೆ. ಈ ವರದಿ ಬಂದ ಬಳಿಕ ಸರಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ. ಸದ್ಯ ಈಗ ಸಮಿತಿ ನೀಡಿರುವ ಪ್ರಾಥಮಿಕ ವರದಿಯೇ ಅಚ್ಚರಿ ಮೂಡಿಸಿದ್ದು ಪೂರ್ಣ ವರದಿ ಬಂದ ಬಳಿಕ ಯಾವೆಲ್ಲ ಅಂಶ ಹೊರಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Comment

Your email address will not be published. Required fields are marked *