ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ/ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆ ನನ್ನ ಜೊತೆಗಿದ್ದಾಳೆ : ಕಿಂಗ್ ಕೊಹ್ಲಿ
ಕ್ರೀಡೆ ನ್ಯೂಸ್: ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅಪ್ಘಾನಿಸ್ತಾನದ ವಿರುದ್ಧ ಸೆ.8ರಂದು ನಡೆದ ಏಷ್ಯಾಕಪ್ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬಳಿಕ ಭಾವುಕರಾಗಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಶತಕವನ್ನು ನನ್ನ ಪತ್ನಿ ಅನುಷ್ಕಾಹಾಗೂ ಪುತ್ರಿ ವಾಮಿಕಾಗೆ ಅರ್ಪಿಸುವೆ ಎಂದು ನುಡಿದಿದ್ದಾರೆ. ಕ್ರಿಕೆಟ್ ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲೂ ನನ್ನೊಂದಿಗೆ ನನ್ನ ತಂಡ ಸಹಕಾರಿಯಾಗಿ […]

