July 2022

ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ| ನಟ ಶ್ರೀಜಿತ್‌ ರವಿ ಫೋಕ್ಸೋ ಕಾಯ್ದೆಯಡಿ ಅರೆಸ್ಟ್

ಸಮಗ್ರ ನ್ಯೂಸ್: ಮಲೆಯಾಳಂನ ಖ್ಯಾತ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದ ಮೇಲೆ ಶ್ರೀಜಿತ್ ರವಿ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಜುಲೈ 4 ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ.ಸದ್ಯ ಶ್ರೀಜಿತ್‌ ರವಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ತ್ರಿಶೂರ್ ಪಶ್ಚಿಮ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ […]

ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ| ನಟ ಶ್ರೀಜಿತ್‌ ರವಿ ಫೋಕ್ಸೋ ಕಾಯ್ದೆಯಡಿ ಅರೆಸ್ಟ್ Read More »

ನಿರಂತರ ಮಳೆ: ಕುಕ್ಕೆಯಲ್ಲಿ ಭಕ್ತರು ವಿರಳ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ನಿರಂತರ ಮಳೆಯಿಂದ ಭಕ್ತರು ತಮ್ಮ ಯಾತ್ರೆಗಳನ್ನೂ ಮುಂದೂಡಿದ್ದು, ಭಕ್ತರಿಂದ ತುಂಬಿ ತುಳುಕುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯು ಎರಡು ದಿನಗಳಿಂದ ಖಾಲಿ ಖಾಲಿಯಾಗಿದೆ. ಪೇಟೆಯಲ್ಲಿ ಯಾತ್ರಿಕರ ವಾಹನ ಓಡಾಟದ ಸಂಖ್ಯೆಯೂ ಇಳಿಮುಖಗೊಂಡಿದೆ. ವ್ಯಾಪಾರ ವ್ಯವಹಾರಗಳು ಇಳಿಮುಖ ಗೊಂಡಿವೆ ಎನ್ನುತ್ತಾರೆ ವ್ಯಾಪಾರಸ್ಥರು. ಇನ್ನು ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನಾಲ್ಕು ದಿನಗಳಿಂದ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತರು ನದಿತೀರದಲ್ಲೇ ಮಿಂದೇಳುತ್ತಾರೆ.

ನಿರಂತರ ಮಳೆ: ಕುಕ್ಕೆಯಲ್ಲಿ ಭಕ್ತರು ವಿರಳ Read More »

ಮಂಗಳೂರು: ಏರ್ ಪೋರ್ಟ್ ರನ್ ವೇ ಸಮೀಪ ರಸ್ತೆ ಕುಸಿತ

ಸಮಗ್ರ ನ್ಯೂಸ್: ಏರ್​ಪೋರ್ಟ್ ರನ್​ವೇ ಬದಿಯಲ್ಲೇ ರಸ್ತೆ ಕುಸಿದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಅದ್ಯಪಾಡಿ ಬಳಿ ಇರುವ ರನ್ ವೇ ಸಮೀಪ ಕುಸಿತವಾಗಿದ್ದು, ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್ ಮಾಡಲಾಗಿದೆ. ಏರ್​​ರ್ಪೋರ್ಟ್ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕ ಮಳೆ, ನೀರಿನ ಹೊರಹೊಮ್ಮುವಿಕೆಯಿಂದ ಕುಸಿತ ಉಂಟಾಗಿದೆ ಎನ್ನಲಾಗುತ್ತಿದೆ. ನಗರದಲ್ಲಿ ಭಾರೀ ಮಳೆ‌ ಮುಂದುವರೆದಿದೆ. ಮಂಗಳೂರು ವಿಮಾನ ನಿಲ್ದಾಣವು ಸೂಕ್ಷ್ಮ ಟೇಬಲ್ ಟಾಪ್ ರನ್​ವೇ ಹೊಂದಿರುವುದರಿಂದ ಈ ವಿದ್ಯಮಾನ ದೇಶದ ಗಮನ ಸೆಳೆದಿದೆ.

ಮಂಗಳೂರು: ಏರ್ ಪೋರ್ಟ್ ರನ್ ವೇ ಸಮೀಪ ರಸ್ತೆ ಕುಸಿತ Read More »

ಉದುರಿಹೋದ “ಕಾಡಮಲ್ಲಿಗೆ”| ಯಕ್ಷರಂಗದ ಧ್ರುವತಾರೆ ವಿಶ್ವನಾಥ ಶೆಟ್ಟಿ ಬೆಳ್ಳಾರೆ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಯಕ್ಷಗಾನ ಕಲಾವಿದ, ಯಕ್ಷರಂಗದ ಕಾಡಮಲ್ಲಿಗೆ ಖ್ಯಾತಿಯ ಬೆಳ್ಳಾರೆ ವಿಶ್ವನಾಥ ರೈ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರು ಕರ್ನಾಟಕ ಮೇಳದಲ್ಲಿ ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಚೇತನಗಳ ಒಡನಾಡಿಯಾಗಿದ್ದರು. ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದರು. ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. 1949ರಲ್ಲಿ ಬೆಳ್ಳಾರೆಯಲ್ಲಿ

ಉದುರಿಹೋದ “ಕಾಡಮಲ್ಲಿಗೆ”| ಯಕ್ಷರಂಗದ ಧ್ರುವತಾರೆ ವಿಶ್ವನಾಥ ಶೆಟ್ಟಿ ಬೆಳ್ಳಾರೆ ಇನ್ನಿಲ್ಲ Read More »

ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ| ಮೂವರು ಸ್ಥಳದಲ್ಲೇ ಸಾವು

ಸಮಗ್ರ‌ ನ್ಯೂಸ್: ಕೆಎಸ್ ಆರ್‌ಟಿಸಿ ಬಸ್ಸು ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮತ್ತಿಹಳ್ಳಿ ಬಳಿ ನಡೆದಿದೆ. ಕಾರು ಮತ್ತು ಬಸ್ಸು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಉಳಿದ ಇಬ್ಬರಿಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರಿನ ತಿಪಟೂರು ತಾಲೂಕಿನ ಮತ್ತಿಹಳ್ಳಿಯಲ್ಲಿ ಘಟನೆ ನಡೆದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ KSRTC ಬಸ್ಸು ಮತ್ತು ತುಮಕೂರಿನಿಂದ ಅರಸೀಕೆರೆಗೆ ಹೋಗುತ್ತಿದ್ದ ಕಾರು ಎಂದು ಗುರುತಿಸಲಾಗಿದೆ.

ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ| ಮೂವರು ಸ್ಥಳದಲ್ಲೇ ಸಾವು Read More »

ಹೆದ್ದಾರಿಯಲ್ಲೇ ಗಜಪ್ರಸವ| ಮುದ್ದಾದ ಮರಿಗೆ ಜನ್ಮನೀಡಿ ಕಾಡುಸೇರಿದ ತಾಯಿಮಗು

ಸಮಗ್ರ ನ್ಯೂಸ್: ತಮಿಳುನಾಡು-ಕೇರಳ ಸಂಪರ್ಕಿಸುವ ವಾಹನ ದಟ್ಟಣೆಯ ಮಾರಾಯೂರ್ ಹೆದ್ದಾರಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ. ಇದರಿಂದ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಾರಾಯೂರ್-ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು. ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆ ಬೇನೆ ತಾಳಲಾರದೇ ರಸ್ತೆಗೆ ಬಂದಿದೆ. ಕಡೆಗೆ ಅಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬದಿಯಲ್ಲೂ ನಿಂತಿದ್ದ ವಾಹನ ಸವಾರರು ಗಜಪ್ರಸವಕ್ಕೆ ಅನುವು

ಹೆದ್ದಾರಿಯಲ್ಲೇ ಗಜಪ್ರಸವ| ಮುದ್ದಾದ ಮರಿಗೆ ಜನ್ಮನೀಡಿ ಕಾಡುಸೇರಿದ ತಾಯಿಮಗು Read More »

ಇಂದು ಪಂಜಾಬ್ ಸಿಎಂ ಭಗವಂತಮಾನ್ ಗೆ ಎರಡನೇ‌ ಮದುವೆ

ಸಮಗ್ರ ನ್ಯೂಸ್: ಪಂಜಾಬ್ ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್​ ಸಿಎಂಗೆ ಇದು ಎರಡನೇ ಮದುವೆ. 48 ವರ್ಷದ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರು ಇಂದು ಚಂಡೀಗಢದಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್​ ಕೌರ್​ ಎಂಬುವರನ್ನು ವರಿಸಲಿದ್ದಾರೆ. ಈ ಹಿಂದೆ ಸ್ಟ್ಯಾಂಡ್​ ಅಪ್​​ ಕಾಮಿಡಿಯನ್​ ಆಗಿದ್ದ ಮಾನ್​, 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಮಾನ್​ ಮತ್ತು ಗುರುಪ್ರೀತ್​ ನಡುವೆ

ಇಂದು ಪಂಜಾಬ್ ಸಿಎಂ ಭಗವಂತಮಾನ್ ಗೆ ಎರಡನೇ‌ ಮದುವೆ Read More »

ಇಂದು ಕೊಡಗು, ದ.ಕ ಜಿಲ್ಲೆಗಳಿಗೆ ಸಚಿವ ಆರ್ ಅಶೋಕ್ ಭೇಟಿ| ಮಳೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ

ಸಮಗ್ರ ನ್ಯೂಸ್: ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಮತ್ತು ಭೂಕಂಪನ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಇಂದು ಭೇಟಿ ನೀಡಿ ಪರಿಶೀಲನೆ ನಡೆಸುವರು. ಎರಡು ಜಿಲ್ಲೆಗಳಲ್ಲಿ ಮಳೆ ಹಾನಿ ಹಾಗೂ ಭೂಕಂಪನ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಎರಡು ಜಿಲ್ಲೆಗಳಿಗೆ ಭೇಟಿ ನೀಡಲಿರುವ ಸಚಿವರು ಸ್ಥಳೀಯರಿಂದ ಮಾಹಿತಿ ಪಡೆಯಲಿದ್ದಾರೆ. ಭೂಕುಸಿತ ಮತ್ತು ಮಳೆ ಹಾನಿ ಬಗ್ಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲಿದ್ದಾರೆ. ಬೆಳಿಗ್ಗೆ 10.30 ಕ್ಕೆ ಸಂಪಾಜೆ -ಮಡಿಕೇರಿ ರಾಷ್ಟ್ರೀಯ ಹೆದ್ದಾರಿ

ಇಂದು ಕೊಡಗು, ದ.ಕ ಜಿಲ್ಲೆಗಳಿಗೆ ಸಚಿವ ಆರ್ ಅಶೋಕ್ ಭೇಟಿ| ಮಳೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ Read More »

ಕರಾವಳಿ, ಮಲೆನಾಡು ಈಗ “ಮಳೆನಾಡು”| ನಿಲ್ಲದ ವರ್ಷಧಾರೆಗೆ ಜನಜೀವನ ತತ್ತರ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮಳೆರಾಯ ತನ್ನ ನೈಜರೂಪ ತೋರಿಸುತ್ತಿದ್ದು ರಾಜ್ಯ ವರುಣನ ಕಾಟಕ್ಕೆ ತತ್ತರಿಸಿದೆ. ಕರಾವಳಿ ಜಿಲ್ಲೆಗಳು ಕೆರೆಯಂತಾಗಿದ್ದು ಮಲೆನಾಡು ಮಳೆನಾಡಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕರಾವಳಿಯ ಹಲವು ಕಡೆ ಕೃತಕ ನೆರೆ ಉಂಟಾಗಿದೆ. ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು ನದಿಗಳು ಅಪಾಯದ ಮಟ್ಟ ತಲುಪಿವೆ. ಇದರಿಂದ ನದಿ ಪಾತ್ರದ ಜನರಿಗೆ ಆತಂಕ ಎದುರಾಗಿದೆ. ಇನ್ನು ಕೆಲವು ಕಡೆ ಭೂಕುಸಿತ, ಗುಡ್ಡ ಕುಸಿತದ ಆತಂಕವಾದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರು

ಕರಾವಳಿ, ಮಲೆನಾಡು ಈಗ “ಮಳೆನಾಡು”| ನಿಲ್ಲದ ವರ್ಷಧಾರೆಗೆ ಜನಜೀವನ ತತ್ತರ Read More »

ಬಂಟ್ವಾಳ: ಗುಡ್ಡ ಕುಸಿದು ಬಿದ್ದು ಇಬ್ಬರು ಕಣ್ಮರೆ; ಮತ್ತಿಬ್ಬರ ರಕ್ಷಣೆ

ಸಮಗ್ರ ನ್ಯೂಸ್: ಭಾರೀ ಮಳೆಗೆ ಮನೆ ಮೇಲೆ ಗುಡ್ಡವೊಂದು ಏಕಾಏಕಿ ಜರಿದು ಬಿದ್ದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಡೆದಿದೆ. ಮನೆ ಮೇಲೆ ಗುಡ್ಡ ಜರಿದ ಪರಿಣಾಮ ಮನೆಯೊಳಗೆ ನಾಲ್ವರು ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳೀಯರಿಂದ ಇಬ್ಬರ ರಕ್ಷಣೆ ಮಾಡಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ. ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಕೊಠಡಿಯತ್ತ ಗುಡ್ಡ ಜರಿದು ಬಿದ್ದಿದೆ. ಕಾರ್ಲೋ ಅವರ ಮನೆಯ ತೋಟದ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಅನೇಕ ವರ್ಷಗಳಿಂದ

ಬಂಟ್ವಾಳ: ಗುಡ್ಡ ಕುಸಿದು ಬಿದ್ದು ಇಬ್ಬರು ಕಣ್ಮರೆ; ಮತ್ತಿಬ್ಬರ ರಕ್ಷಣೆ Read More »