ಕುಂದಾಪುರ: ಲಾಡ್ಜ್ ನಲ್ಲಿ ಪತ್ತೆಯಾದ ಭಿನ್ನಕೋಮಿನ ಜೋಡಿ; ಸಂಘಟನೆ ಕಾರ್ಯಕರ್ತರಿಂದ ದಾಳಿ

ಸಮಗ್ರ ನ್ಯೂಸ್: ಮಂಗಳೂರಿನಿಂದ ಬೈಂದೂರು ಸಮೀಪದ ಉಪ್ಪುಂದದ ಹೋಟೆಲ್‌ಗೆ ಬಂದಿದ್ದ ಅನ್ಯಕೋಮಿನ ಜೋಡಿಯೊಂದನ್ನು ಸಾರ್ವಜನಿಕರು ಬೈಂದೂರು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

. Ad Widget . Ad Widget

ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ಗುಜಿರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಮೀರ್ ಆಲಿ (45) ಎಂಬಾತ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಎರ್ಟಿಕಾ ಕಾರಿನಲ್ಲಿ ಹಿಂದೂ ಧರ್ಮದ ಸುಮಾರು 28 ವರ್ಷದ ಯುವತಿಯೊಂದಿಗೆ ಉಪ್ಪುಂದದ ಪರಿಚಯ ಹೋಟೇಲ್‌ಗೆ ಕರೆ ತಂದಿದ್ದು ಲಾಡ್ಜ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

. Ad Widget . . Ad Widget . Ad Widget

ಈ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಗೊತ್ತಾಗಿ ಹೋಟೆಲ್‌ಗೆ ಮುತ್ತಿಗೆ ಹಾಕಿದ್ದು, ಈ ವಿಷಯ ಗಮನಕ್ಕೆ ಬಂದ ಕೂಡಲೇ ಜೋಡಿ ಕೋಣೆಯಿಂದ ಹೊರ ಬಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದಾಗ ಹೊರಗಡೆ ಸೇರಿದ ಗುಂಪು ಥಳಿಸಿದೆ. ಬಳಿಕ ಪೊಲೀಸರ ಸಹಾಯದಿಂದ ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಯುವತಿ ಅಮೀರ್ ಆಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ಯುವತಿಯ ಮನೆಯವರಿಗೆ ಪೊಲೀಸರು ಮಾಹಿತಿ ನೀಡಿದ್ದು, ಮನೆಯವರು ಠಾಣೆಗೆ ಬಂದು ರಾಜಿಯಲ್ಲಿ ಪ್ರಕರಣ ಇತ್ಯರ್ಥಪಡಿಸಿದ್ದಾರೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *