ಮಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ನಲ್ಲಿ ಅಗ್ನಿ ಅವಘಡ

ಸಮಗ್ರ ನ್ಯೂಸ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ನಗರ ಹೊರವಲಯದ ಪಡೀಲ್ ಅಳಪೆ ಸಮೀಪದ ನಾಗುರಿ ಬಳಿ ಜೂ.23 ರ ಶುಕ್ರವಾರ ನಡೆದಿದೆ.

. Ad Widget . Ad Widget . Ad Widget .

ಬೆಳಗ್ಗೆ ಸುಮಾರು 8 ಗಂಟೆಗೆ ಶೋರೂಮ್‌ನಲ್ಲಿ ಹೊಗೆ ಕಾಣಿಸಿದೆ. ಶೋರೂಮ್‌ನ ಮೇಲೇ ಇದ್ದ ಮನೆಯವರು ಹೊಗೆಯಾಡುತ್ತಿರುವುದನ್ನು ಕಂಡ ಮನೆ ಮಂದಿ ಕೆಳಗಿಳಿದು ಬಂದಾಗ ಪರಿಶೀಲಿಸಿದಾಗ ಅಗ್ನಿ ಅವಘಡ ಗಮನಕ್ಕೆ ಬಂದಿದೆ. ಅಗ್ನಿ ಅವಘಡದಿಂದ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *