ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಲಾಡ್ಜಿಗೆ ಕರೆದೊಯ್ದು ಅತ್ಯಾಚಾರ| ನೆರೆಮನೆಯ ಯುವಕನ‌‌ ಮೇಲೆ‌ ದೂರು‌‌ ದಾಖಲು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯನ್ನು ಲಾಡ್ಜಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಬಣ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಮುನಾಸ್ಸಿರ್ ಎಂದು ಗುರುತಿಸಲಾಗಿದೆ.

. Ad Widget . Ad Widget

ಆರೋಪಿ ಬಾಲಕಿಯ ನೆರೆಮನೆಯವನಾಗಿದ್ದು, ಬಾಲಕಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು ತನ್ನನ್ನು ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

. Ad Widget . . Ad Widget . Ad Widget

ಮೇ 30 ರಂದು ಬಾಲಕಿ ಮನೆಯಿಂದ ಶಾಲೆಗೆ ಹೊರಟು ಅರ್ಧದಾರಿ ತಲುಪಿದ ವೇಳೆ ಮುನಾವರ್ ಅಲ್ಲಿಗೆ ಬಂದು ನಿನ್ನನ್ನು ಕಾರಿನಲ್ಲಿ ಶಾಲೆಗೆ ಬಿಡುತ್ತೇನೆ ಬಾ ಎಂದು ಕೈಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೆ ಉಪ್ಪಿನಂಗಡಿ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಅದೇ ರೀತಿ ಜೂನ್ 7ರಂದು ಬಾಲಕಿ ಶಾಲೆಗೆ ಹೋಗುತ್ತಿದ್ದ ವೇಳೆ ಮತ್ತೆ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದು ಘಟನೆಯನ್ನು ಯಾರಿಗಾದರು ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ಲಾಡ್ಜಿನಿಂದ ಕರೆದುಕೊಂಡು ಬಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ 71/2022 ಕಲಂ 363, 376(2)(ಎನ್ )506 ಐಪಿಸಿ ಮತ್ತು ಕಲಂ 5 (ಎಲ್ ) 6 ಪೋಕ್ಸೋ ಕಾಯಿದೆ 2012 ರಂತೆ ಪ್ರಕರಣ ದಾಖಲಾಗಿದೆ.

1 thought on “ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯನ್ನು ಲಾಡ್ಜಿಗೆ ಕರೆದೊಯ್ದು ಅತ್ಯಾಚಾರ| ನೆರೆಮನೆಯ ಯುವಕನ‌‌ ಮೇಲೆ‌ ದೂರು‌‌ ದಾಖಲು”

Leave a Comment

Your email address will not be published. Required fields are marked *