ಸಮಗ್ರ ನ್ಯೂಸ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ವರ್ಷದ ನಂತರ ಸಾಲದ ಮೇಲಿನ ಬಡ್ಡಿಯ ದರವನ್ನು ಏರಿಕೆ ಮಾಡುವ ದಿಢೀರ್ ನಿರ್ಧಾರವನ್ನು ಕೈಗೊಂಡಿದೆ.
ರೆಪೋ ದರ ಶೇಕಡ 0.4 ರಷ್ಟು, ಸಿ.ಆರ್.ಆರ್. ದರ ಶೇಕಡ 0.5 ರಷ್ಟು ಹೆಚ್ಚಳವಾಗಿದ್ದು, ಇದರಿಂದ ಇಎಂಐ ತುಟ್ಟಿಯಾಗಲಿದೆ. ಆರ್ ಬಿಐ ಕೈಗೊಂಡ ಈ ಬಡ್ಡಿ ಏರಿಕೆಯ ಕ್ರಮದಿಂದ ವಾಹನ, ಗೃಹ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರಗಳು ಕೂಡ ಮತ್ತಷ್ಟು ಏರಿಕೆಯಾಗಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ. ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಪಡೆದವರಿಗೆ ಬಡ್ಡಿ ದರ ಏರಿಕೆಯ ಬಿಸಿ ತಟ್ಟಲಿದೆ.




























