ಉಕ್ರೇನ್ ನಲ್ಲಿ ನವೀನ್ ಮೃತದೇಹ‌ ಪತ್ತೆ| ತಾಯ್ನಾಡಿಗೆ ಕರೆತರುವ ಪ್ರಯತ್ನದಲ್ಲಿ ಸಿಎಂ ಬೊಮ್ಮಾಯಿ|

. Ad Widget . Ad Widget

ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದ ಕನ್ನಡಿಗ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

. Ad Widget . . Ad Widget . Ad Widget

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ನವೀನ್ ಮೃತದೇಹ ತರುವ ವಿಚಾರವಾಗಿ, ಕೇಂದ್ರ ಸಚಿವ ಜೈಶಂಕರ್ ಜತೆ ಮಾತನಾಡಿದ್ದೇನೆ. ನವೀನ್ ಮೃತದೇಹ ಉಕ್ರೇನ್ ಶವಾಗಾರದಲ್ಲಿ ಇರಿಸಲಾಗಿದೆ. ಯುದ್ಧ ಇನ್ನೂ ನಡೆಯುತ್ತಿರುವುದರಿಂದ ತಕ್ಷಣ ಮೃತದೇಹ ತರಲು ಸಾಧ್ಯವಾಗಿಲ್ಲ. ಆದರೆ ಮೃತದೇಹ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರಾಯಭಾರ ಕಚೇರಿ ಅಧಿಕಾರಿಗಳ ಜತೆಯೂ ಸಂಪರ್ಕದಲ್ಲಿದ್ದೇನೆ. ನವೀನ್ ಮೃತದೇಹ ತರುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದ್ದೇನೆ. ನೋಡೋಣ ಎಂದು ಹೇಳಿದರು.

Leave a Comment

Your email address will not be published. Required fields are marked *