ಸಮಗ್ರ ನ್ಯೂಸ್ ಡೆಸ್ಕ್: ಸುಳ್ಯ ತಾಲೂಕಿನ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯ ಕ್ರಮಗಳೊಂದಿಗೆ ಆರಂಭಗೊಂಡಿದೆ. ಫೆ.1 ರಂದು ರಾತ್ರಿ ಧ್ವಜಾರೋಹಣ ನಡೆಯಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ದಿನೇಶ್ ಗರಡಿ,ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ ಆರ್, ಶ್ರೀಮತಿ ರೋಹಿಣಿ ಆರ್ನೋಜಿ , ಸಲಹಾ ಸಮಿತಿಯ ಡಾ.ರಾಮಯ್ಯ ಭಟ್ , ಸದಾನಂದ ರೈ ಅರ್ಗುಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ದೇವಳದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ , ದೈವದ ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯ, ಉತ್ಸವ ಸಮಿತಿ ಸಂಚಾಲಕರು, ಸದಸ್ಯರು,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಫೆ.2 ರಂದು ಮಹಾ ಪೂಜೆ, ನಿತ್ಯಬಲಿ.ಫೆ.3.ರಂದು ಮಹಾಪೂಜೆ , ನಿತ್ಯಬಲಿ ಸಂಜೆ ಹಸಿರು ಕಾಣಿಕೆ ಮೆರವಣಿಗೆ ಪುತ್ಯ ಕಟ್ಟೆಯಿಂದ ಆರಂಭ ಗೊಂಡು ದೇವಳಕ್ಕೆ ಸಮರ್ಪಣೆಗೊಳ್ಳಲಿದೆ. ದಂಡಮಾಲೆ ಹಾಕಿ ಬಲಿ , ಬೇತಾಳಗಳು ಇಳಿಯುವುದು.ಫೆ4. ರಂದು ಶ್ರೀ ದೇವರ ಉತ್ಸವ, ಮಹಾ ಪೂಜೆ.ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮರಥೋತ್ಸವವು ಜರುಗಲಿದೆ.






