ಠಾಣೆಯೆದರು ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೇ ಕನ್ನ ಹಾಕಿದ ಚಾಣಾಕ್ಷ ಕಳ್ಳ

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನ ಕಳ್ಳತನವಾಗಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪೊಲೀಸ್ ಠಾಣೆ ಎದುರು ನಡೆದಿದೆ.

Ad Widget

ನಾಗಪ್ಪ ಹಡಪದ ಎಂಬ ವ್ಯಕ್ತಿ ಪೊಲೀಸ್ ವಾಹನ ಎಗರಿಸಿಕೊಂಡು ಪೊಲೀಸ್ ವಾಹನದಲ್ಲಿ ಬ್ಯಾಡಗಿವರೆಗೂ ಹೋಗಿದ್ದಾನೆ. ಸದ್ಯ ಪೊಲೀಸರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ವಾಹನ ಪತ್ತೆ ಹಚ್ಚಿ ಆರೋಪಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣಿಗೇರಿ ಪಟ್ಟಣದ ಅಂಬಿಕಾ ನಗರ ನಿವಾಸಿ ನಾಗಪ್ಪ ಹಡಪದ ಎಂಬುವವರು ಪೊಲೀಸ್ ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನದೊಂದಿಗೆ ಬ್ಯಾಡಗಿವರೆಗೂ ಹೋಗಿದ್ದಾರೆ. ಸಿಬ್ಬಂದಿ ವಾಹನ ಬಳಸಿ ವಾಹನದಲ್ಲೇ‌ ಕೀ ಬಿಟ್ಟಿದ್ದರು. ಇದನ್ನು ಗಮನಿಸಿದ ನಾಗಪ್ಪ ಹಡಪದ ವಾಹನವನ್ನು ತೆಗೆದುಕೊಂಡು ಬ್ಯಾಡಗಿವರೆಗೆ ಹೋಗಿದ್ದಾರೆ. ಸದ್ಯ ತಕ್ಷಣ ಎಚ್ಚೆತ್ತ ಪೊಲೀಸರು ವಾಹನವನ್ನು ಹಿಂಬಾಲಿಸಿ ವಾಹನ ಸಮೇತ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕಳ್ಳತನವಾಗಿದ್ದ ವಾಹನವನ್ನು ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ಬಳಸುತ್ತಿದ್ದರು.

Leave a Comment

Your email address will not be published. Required fields are marked *