ಮಗುವಿನೊಂದಿಗೆ ಬಾವಿಗೆ ಜಿಗಿದು‌ ತಾಯಿ ಆತ್ಮಹತ್ಯೆ

ಬಾಗಲಕೋಟೆ: ತನ್ನ ಒಂದು ವರ್ಷದ ಮಗುವನ್ನು ಹಿಡಿದುಕೊಂಡು ತಾಯಿಯೋರ್ವಳು ಬಾವಿಗೆ ಹಾರಿದ ದುರ್ಘಟನೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದೆ.

. Ad Widget . Ad Widget

ಘಟನೆಯಲ್ಲಿ ಮಗು ಶಿವಾನಿ ಸಾವನ್ನಪ್ಪಿದ್ದು, ಮಗುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದು, ತಾಯಿಗಾಗಿ ಬಾವಿಯಲ್ಲಿ ಹುಡುಕಾಟ ಮುಂದುವರೆದಿದೆ. ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ(26) ಎಂಬ ತಾಯಿಯೇ ತನ್ನ ಮಗುವಿನೊಂದಿಗೆ ಬಾವಿಗೆ ಜಿಗಿದ ಮಹಿಳೆ.

. Ad Widget . . Ad Widget . Ad Widget

ಈಕೆ ಹೆರಿಗೆಗಾಗಿ ತನ್ನ ಅಜ್ಜಿಮನೆ ರಾಘಾಪುರಕ್ಕೆ ಬಂದಿದ್ದಳು. ಹೆರಿಗೆ ಬಳಿಕ ಇಂದು ಗಂಡನ ಮನೆಯವರು ಕರೆದುಕೊಂಡು ಈಕೆಯನ್ನು ಮರಳಿ ಕರೆದೊಯ್ಯಲು ಬಂದಿದ್ದರು. ಆದರೆ ಫಕೀರವ್ವ ದಿಢೀರನೇ ತನ್ನ ಅಜ್ಜಿಯ ಜಮೀನಿನಲ್ಲಿ ಇರುವ ಬಾವಿಗೆ ಮಗುವಿನ ಜತೆಗೆ ಹಾರಿದ್ದಾಳೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

Leave a Comment

Your email address will not be published. Required fields are marked *