ಸೆ12ರ ವರೆಗೆ ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ| ಎಲ್ಲೋ ಅಲರ್ಟ್ ಘೋಷಣೆ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಇನ್ನು ಮುಂದುವರೆದಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಸೆಪ್ಟೆಂಬರ್ 12 ರವರೆಗೆ ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

. Ad Widget . Ad Widget . Ad Widget .

ಇಲಾಖೆಯ ಪ್ರಕಾರ ಸೆಪ್ಟೆಂಬರ್‌ 12ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ರಾಜ್ಯದಲ್ಲಿ ಬಿದ್ದ ಮಳೆಯನುಸಾರ ಉಡುಪಿಯ ಕೊಲ್ಲೂರು ಭಾಗದಲ್ಲಿ 9 ಮಿ.ಮೀ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ರಿಂದ 5 ಮಿ.ಮೀ. ಮಳೆಯಾಗಿದೆ.
ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಜಿಲ್ಲೆಯಲ್ಲಿ 18.6 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 31 ಮಿ.ಮೀ, ಬಂಟ್ವಾಳ 11.4 ಮಿ.ಮೀ, ಮಂಗಳೂರು 14.4 ಮಿ.ಮೀ, ಪುತ್ತೂರು 13.6 ಮಿ.ಮೀ, ಸುಳ್ಯದಲ್ಲಿ 9.4 ಮಿ.ಮೀ, ಮೂಡುಬಿದಿರೆ 21.2 ಮಿ.ಮೀ, ಕಡಬದಲ್ಲಿ 16.9 ಮಿ.ಮೀ ಮಳೆಯಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 39.7ಮಿ. ಮೀ. ಮಳೆ ದಾಖಲಾಗಿದೆ. ಉಡುಪಿ: 41.3 ಮಿ.ಮೀ., ಬ್ರಹ್ಮಾವರ: 37.9 ಮಿ. ಮೀ., ಕಾಪು: 24.5 ಮಿ.ಮೀ., ಕುಂದಾಪುರ: 36.3 ಮಿ.ಮೀ., ಬೈಂದೂರು: 30.2 ಮಿ. ಮೀ., ಕಾರ್ಕಳ: 31.5 ಮಿ.ಮೀ., ಹೆಬ್ರಿ: 79.8 ಮಿ. ಮೀ. ಮಳೆ ಬಿದ್ದಿದೆ.

Leave a Comment

Your email address will not be published. Required fields are marked *