ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್

ನವದೆಹಲಿ: ಒಂದು ದಿನದ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರಿಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ.

. Ad Widget . Ad Widget . Ad Widget

ಈಗಾಗಲೇ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲೇ ಸಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಅಗತ್ಯ ವಸ್ತು ಸೇರಿದಂತೆ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನವೂ ತೈಲ ಬೆಲೆ ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

. Ad Widget .

ಈಗಾಗಲೇ ದೇಶದ ಬಹುತೇಕ ಕಡೆ 100 ರೂ.ಗಿಂತ ಜಾಸ್ತಿಯಾಗಿರುವ ಪೆಟ್ರೋಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಗೆ ಪೈಪೋಟಿ ನೀಡುವಂತೆ ಡೀಸೆಲ್ ದರವೂ ಏರಿಕೆಯಾಗಿದೆ ಕೆಲವೆಡೆ ಶತಕ ಬಾರಿಸಿದೆ.

Leave a Comment

Your email address will not be published. Required fields are marked *