ಕಚ್ಚಿದ ಹಾವನ್ನು ಜೊತೆಗೆ ಹಿಡಿದುಕೊಂಡು ಆಸ್ಪತ್ರೆಗೆ ಬಂದ

ಬಳ್ಳಾರಿ: ಹಾವು ಅಂದ್ರೆ ಯಾರಿಗೆ ತಾನೇ ಭಯ ಇರಲ್ಲ ಹೇಳಿ. ಇನ್ನು ಹಾವು ಕಚ್ಚಿದ್ರೆ ಇನ್ನೆಷ್ಟು ಭಯ ಆಗ್ಬೇಡ. ಆದ್ರೆ ಇಲ್ಲೊಬ್ಬ ಭೂಪ ಕಚ್ಚಿದ ಹಾವನ್ನೇ ಧೈರ್ಯವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ.

Ad Widget ... ..

ಈ ವಿಚಿತ್ರ ಘಟನೆ ನಡೆದಿದ್ದು ಬಳ್ಳಾರಿ‌ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿಯಲ್ಲಿ. ಗ್ರಾಮದ ಕಾಡಪ್ಪ ಎಂಬುವವನೇ ಹಾವು ಕಡಿತಕ್ಕೊಳಗಾದವನು.
ಕಾಡಪ್ಪ ಎಲ್ಲೋ ಹೋಗಿದ್ದಾಗ ಹಾವು ಕಚ್ಚಿದೆ. ಅದೆಲ್ಲಿತ್ತೋ ಕೋಪ ಕಚ್ಚಿದ ಹಾವನ್ನ ಹಿಡಿದು ಆಸ್ಪತ್ರೆಗೆ ಬಂದಿದ್ದಾನೆ. ಹಾವನ್ನು ನೋಡಿ ಆಸ್ಪತ್ರೆಯವರೆಲ್ಲ ಗಾಬರಿಯಾಗಿದ್ದಾರೆ. ಆತನಿಗೆ ಬೈದು ಬುದ್ದಿ ಹೇಳಿದ್ದಾರೆ.
ಯಾರ ಮಾತಿಗೂ ಜಗ್ಗದೆ ಹಾವನ್ನು ಹಿಡಿದುಕೊಂಡರ ಕುಳಿತಿದ್ದನಂತೆ. ಆನಂತರ ಎಲ್ಲರು ತರಾಟೆಗೆ ತೆಗೆದುಕೊಂಡ ಬಳಿಕ ಹಾವನ್ನು ರಸ್ತೆ ಬದಿಗೆ ಬಿಟ್ಟಿದ್ದಾನೆ.ನಂತರ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *