Ad Widget

ಪೈಲಟ್ ಗೆ ಬಾಗಿಲು ತೆರೆದ ಬಿಜೆಪಿ, ಕಾಂಗ್ರೆಸ್ ಗೆ ರೆಡ್ ಅಲರ್ಟ್

ಜೈಪುರ: ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ಗಾಗಿ ಬಿಜೆಪಿ ತನ್ನ ಪಕ್ಷದ ಬಾಗಿಲು ತೆರೆದಿದೆ. ಪರೋಕ್ಷವಾಗಿ ಈ ಬಗ್ಗೆ ಸಂಕೇತ ನೀಡಿರುವ ಬಿಜೆಪಿ ನಾಯಕ, ದೇಶಕ್ಕೆ ಮೊದಲ ಆದ್ಯತೆ ನೀಡುವ ಎಲ್ಲಾ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.
ರಾಜಸ್ಥಾನ ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಈ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ದೃಷ್ಟಿಕೋನವಿಲ್ಲ. ಹೀಗಾಗಿ ನಾಯಕರು ಆ ಪಕ್ಷ ಬಿಟ್ಟು ಉತ್ತಮ ದೃಷ್ಟಿಕೋನವುಳ್ಳ ಮತ್ತೊಂದು ಪಕ್ಷಕ್ಕೆ ಹೋಗಬೇಕು ಎಂದಿದ್ದಾರೆ. ಇನ್ನು ಸಚಿನ್ ಪೈಲಟ್ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರವಾಗಿ ಉತ್ತರಿಸಿದ ರಾಠೋಡ್ ದೇಶಕ್ಕೆ ಪ್ರಥಮ ಆದ್ಯತೆ ನೀಡುವ ಎಲ್ಲಾ ನಾಯಕರಿಗೆ ನಮ್ಮ ಪಕ್ಷದ ಬಾಗಿಲು ತೆರೆದಿದೆ ಎಂದಿದ್ದಾರೆ.
ಕಾಂಗ್ರೆಸ್‌ ಪಕ್ಷ ಒಡೆದು ಹೋಗುತ್ತಿರುವುದಕ್ಕೆ ರಾಷ್ಟ್ರೀಯ ನೇತೃತ್ವವೇ ಕಾರಣ ಎಂದಿರುವ ರಾಠೋಡ್ ‘ಕೇಂದ್ರದಲ್ಲಿ ನೇತೃತ್ವ ಬಲ ಕಳೆದುಕೊಂಡರೆ, ಪ್ರಾದೇಶಿಕ ನಾಯಕರು ತಮ್ಮದೇ ಇಚ್ಛೆಯಂತೆ ನಡೆಸುಕೊಳ್ಳುತ್ತಾರೆ. ದೃಷ್ಟಿಕೊನವಿಲ್ಲದ ಪಕ್ಷ ಬಿಟ್ಟು ನಾಯಕರು ಉತ್ತಮ ವಿಷನ್ ಇರುವ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂದಿದ್ದಾರೆ. ‘
ಈ ನಡುವೆ ಪೈಲಟ್ ದೆಹಲಿಗೆ ಹಾರಿದ್ದು ಕಾಂಗ್ರೆಸ್ ನಲ್ಲಿ ಸಣ್ಣ ನಡುಕ ಹುಟ್ಟಿಸಿದೆ. ಸಚಿನ್ ಪೈಲಟ್ ನಡೆ ಈಗ ತೀವ್ರ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ಗೆ ರೆಡ್ ಅಲರ್ಟ್ ಆಗಿದೆ.

Ad Widget . Ad Widget . Ad Widget . Ad Widget . Ad Widget . Ad Widget

Leave a Comment

Your email address will not be published. Required fields are marked *